ಉಮಾಶ್ರೀ, ರಂಗಭೂಮಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದ ನಟಿ. ಸಕ್ರಿಯವಾಗಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಉಮಾಶ್ರೀ ,ಹಲವು ವರ್ಷಗಳ ನಂತರ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ವಾಪಸಾಗಿದ್ದಾರೆ.
ಉಮಾಶ್ರೀ ಅಭಿನಯದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ ತಂಡದ ಸುದ್ದಿಗೋಷ್ಠಿ - ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಉಮಾಶ್ರೀ
'ಆರತಿಗೊಬ್ಬ ಕೀರ್ತಿಗೊಬ್ಬ' ತೆಲುಗು ಧಾರಾವಾಹಿಯೊಂದರ ರಿಮೇಕ್. ಇದು ಅವಳಿ ಜವಳಿ ಅಣ್ಣ-ತಮ್ಮನ ಕಥೆ. ಚಿತ್ರವನ್ನು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಿರ್ದೇಶಕ ಮೈಸೂರು ಮಂಜು ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.
ಈ ಧಾರಾವಾಹಿಯಲ್ಲಿ ಉಮಾಶ್ರೀ 'ಪುಟ್ಮಲ್ಲಿ' ಪಾತ್ರಧಾರಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಸ್ಟೈಲಿನಲ್ಲಿ ಚಿತ್ರೀಕರಣ ಮಾಡಿರುವ 'ಆರತಿಗೊಬ್ಬ ಕೀರ್ತಿಗೊಬ್ಬ' ತಂಡ ತಮ್ಮ ಧಾರಾವಾಹಿ ವಿಶೇಷತೆ ಬಗ್ಗೆ ಹೇಳಿಕೊಳ್ಳಲು ಸುದ್ದಿಗೋಷ್ಠಿ ಏರ್ಪಡಿಸಿತ್ತು. ಉಮಾಶ್ರೀ, ನಿರ್ದೇಶಕ ಮೈಸೂರು ಮಂಜು, ಕಿರುತೆರೆ ಕಲಾವಿದರಾದ ಅನಂತ ವೇಲು, ಸುರೇಶ್, ನಟಿ ದೀಪಿಕಾ, ಪೂರ್ಣಚಂದ್ರ ತೇಜಸ್ವಿ , ಗಜೇಂದ್ರ ಸೇರಿದಂತೆ ಇಡೀ 'ಆರತಿಗೊಬ್ಬ ಕೀರ್ತಿಗೊಬ್ಬ' ಸೀರಿಯಲ್ ತಂಡ ಈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿತ್ತು.
'ಆರತಿಗೊಬ್ಬ ಕೀರ್ತಿಗೊಬ್ಬ' ತೆಲುಗು ಧಾರಾವಾಹಿಯೊಂದರ ರೀಮೇಕ್. ಇದು ಅವಳಿ ಜವಳಿ ಅಣ್ಣ-ತಮ್ಮನ ಕಥೆ. ಚಿತ್ರವನ್ನು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಿರ್ದೇಶಕ ಮೈಸೂರು ಮಂಜು ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ದ್ವಿಪಾತ್ರಗಳಿಗೆ ದೀಪಿಕಾ ಹಾಗೂ ಸುಜಾತ ಜೋಡಿಯಾಗಿದ್ದಾರೆ. ಧಾರಾವಾಹಿಗೆ ಜಯದೇವ ಸಂಭಾಷಣೆ ಬರೆದಿದ್ದು ಭೋಗರಾಜ್ ಹಾಗೂ ಗುರುಸ್ವಾಮಿ ಕುಪ್ಯ ಈ ಧಾರಾವಾಹಿಯ ಕ್ಯಾಮರಾಮನ್ಗಳಾಗಿ ಕೆಲಸ ಮಾಡಿದ್ದಾರೆ. ಕಾರ್ತಿಕ್ ಶರ್ಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದೇ ತಿಂಗಳ 23 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.