ಸುಮಾರು ಐದು ವರ್ಷಗಳ ಕಾಲ ಧಾರಾವಾಹಿಗಳಿಂದ ದೂರ ಉಳಿದಿದ್ದ ಅಪರ್ಣಾ ಇದೀಗ ಮತ್ತೆ ಧಾರಾವಾಹಿಯಲ್ಲಿ ತಾಯಿಯ ಪಾತ್ರದ ಮೂಲಕ ಅಭಿನಯನಕ್ಕೆ ಮರಳಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರವಾಹಿ 'ಇವಳು ಸುಜಾತ'ದಲ್ಲಿ ಅಪರ್ಣಾ ನಟಿಸಿದ್ದಾರೆ. ಹಿಂದಿನ ತಲೆಮಾರಿಗೂ ಈ ತಲೆಮಾರಿಗೂ ಪರಿಚಯ ಇರುವ ಏಕೈಕ ನಿರೂಪಕಿ ಅಂದ್ರೆ ಅಪರ್ಣಾ ವಸ್ತಾರೆ.
90ರ ದಶಕದಿಂದಲೂ ಟಿವಿಯಲ್ಲಿ ವಾರ್ತಾವಾಚಕಿಯಾಗಿ ಹಾಗೂ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅಪರ್ಣಾ ಇಂದಿಗೂ ಮನೆಮಾತಾಗಿದ್ದಾರೆ.
ಇವಳು ಸುಜಾತ ಧಾರಾವಾಹಿಯಲ್ಲಿ ಅಪರ್ಣಾ ಟಿ ಎನ್ ಸೀತಾರಾಮ್ ಅವರ ಧಾರಾವಾಹಿಗಳಲ್ಲಿ ನಟಿಸಿದ್ದ ಅಪರ್ಣಾ ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ನಲ್ಲಿ ವರಲಕ್ಷ್ಮಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ಪಾರ್ಥನ ತಾಯಿಯಾಗಿ ಹಾಗೂ ಜವಾಬ್ದಾರಿಯುತ ಸಂಸ್ಥೆಯ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದಾರೆ ಅಪರ್ಣಾ.
ಅಪರ್ಣಾ ಅವರೇ ಹೇಳಿಕೊಂಡಂತೆ ಐದು ವರ್ಷಗಳ ನಂತರ ಧಾರವಾಹಿಯಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ. ಮತ್ತೆ ಅಭಿನಯ ಎನ್ನುವುದು ಹೊಸತನ್ನು ಕಲಿಯುವುದು ಎಂದು ಅಭಿಪ್ರಾಯಪಟ್ಟಿದ್ದಾರೆ.