ಕರ್ನಾಟಕ

karnataka

ಮಾಸ್ಕ್​ ಧರಿಸಿ ಫೋಟೋಶೂಟ್ ಮಾಡಿಸುವ ಕಾಲ ಬಂದಿದೆ...ಕಿರುತೆರೆ ನಟಿ

By

Published : Jul 11, 2020, 10:04 AM IST

Updated : Jul 11, 2020, 10:14 AM IST

ಮೊದಲು ಬಟ್ಟೆಗಳ ಬ್ಯ್ರಾಂಡ್​​ಗಾಗಿ ಫೋಟೋಶೂಟ್ ಮಾಡಿಸುತ್ತಿದ್ದೆ, ಈಗ ಮಾಸ್ಕ್​ ಧರಿಸಿ ಫೋಟೋಶೂಟ್ ಮಾಡಿಸುವ ಕಾಲ ಬಂದಿದೆ ಎಂದು ಕಿರುತೆರೆ ನಟಿ ಅನುಶ್ರೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Anushree talked about importance of mask
ಕಿರುತೆರೆ ನಟಿ

ಕೊರೊನಾ ತಡೆಗಟ್ಟಲು ಸರ್ಕಾರ ಬಹಳ ಪ್ರಯತ್ನಿಸುತ್ತಿದೆ. ಆದರೂ ಪರಿಸ್ಥಿತಿ ಬಹಳ ಕೈ ಮೀರಿದೆ. ಕೊರೊನಾಗೆ ಲಸಿಕೆ ಬಂದಿದೆ ಎನ್ನಲಾದರೂ ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

ಮಾಸ್ಕ್ ಮಹತ್ವ ತಿಳಿಸಿದ ಅನುಶ್ರೀ ಜನಾರ್ಧನ್

ಈ ನಡುವೆ ಅನೇಕ ಸೆಲಬ್ರಿಟಿಗಳು ಪ್ರತಿದಿನ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮನೆಯಿಂದ ಹೊರಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ​ ಕೈಯ್ಯಲ್ಲಿ ಸ್ಯಾನಿಟೈಜರ್ ಹಿಡಿದು ಬರುವಂತಾಗಿದೆ. ಇದೀಗ ಮಾಸ್ಕ್ ಧರಿಸುವುದು ಕೂಡಾ ಫ್ಯಾಷನ್ ಆಗಿ ಹೋಗಿದೆ ಎಂದು ಕಿರುತೆರೆ ನಟಿ , ರೂಪದರ್ಶಿ ಅನುಶ್ರೀ ಜನಾರ್ಧನ್ ಅಭಿಪ್ರಾಯ ಪಟ್ಟಿದ್ದಾರೆ.

ಕಿರುತೆರೆ ನಟಿ ಅನುಶ್ರೀ

'ಲಾಕ್ ಡೌನ್​​​​ಗಿಂತ ಮುನ್ನ ಎಲ್ಲರ ಜೀವನ ತುಂಬಾನೇ ಚೆನ್ನಾಗಿತ್ತು. ಆದರೆ ಲಾಕ್ ಡೌನ್ ನಂತರ ಇಡೀ ಚಿತ್ರಣ ಬದಲಾಗಿದೆ. ಜೀವನ ಕಠಿಣವಾಗಿದೆ. ಮೊದಲೆಲ್ಲಾ ಮನೆಯಲ್ಲಿ ಇರಲು ಕಷ್ಟವಾಗುತ್ತಿತ್ತು. ಆದರೆ ನಂತರ ಲಾಕ್​ ಡೌನ್​ ಪ್ರಾಮುಖ್ಯತೆ ಅರ್ಥವಾಯ್ತು. ಇದೀಗ ಲಾಕ್​ ಡೌನ್​ ಸಡಿಲವಾಗಿದೆ. ಆದರೆ ಸ್ಯಾನಿಟೈಜರ್​​​​, ಮಾಸ್ಕ್​, ಗ್ಲೌಸ್​​​ಗಳು ಇಲ್ಲದೆ ಯಾವ ಕೆಲಸಗಳೂ ಸಾಗುತ್ತಿಲ್ಲ ಎನ್ನುತ್ತಾರೆ ರಂಗನಾಯಕಿ ಹುಡುಗಿ ಅನುಶ್ರೀ.

ರಂಗನಾಯಕಿ ಧಾರಾವಾಹಿ ನಟಿ

ಇಷ್ಟು ವರ್ಷಗಳ ಕಾಲ ಬಟ್ಟೆಗಳಿಗೆ ಬ್ರ್ಯಾಡಿಂಗ್ ಉದ್ದೇಶದಿಂದ ಫೋಟೋಶೂಟ್ ಮಾಡಿಸುತ್ತಿದ್ದೆ. ಈಗ ಕಾಲ ಅದೆಷ್ಟು ಬದಲಾಗಿದೆ ಎಂದರೆ ಮಾಸ್ಕ್​​​​​​​​​​​​​​ಗಳಿಗಾಗಿ ಫೋಟೋ ಶೂಟ್ ಮಾಡಲು ನನಗೆ ಕೇಳುತ್ತಿದ್ದಾರೆ ಎನ್ನುವ ಅನುಶ್ರೀ, ಮಾಸ್ಕ್ ಧರಿಸುವುದು ಫ್ಯಾಷನ್ ಗಾಗಿ ಅಲ್ಲ, ಟ್ರೆಂಡ್​​​​​​​​​​ಗಾಗಿಯೂ ಅಲ್ಲ, ಬದಲಿಗೆ ಕೇವಲ ನಮ್ಮ ಸುರಕ್ಷತೆಗಾಗಿ. ಆದರೆ ಕೆಲವರು ಮಾಸ್ಕ್ ಬದಲು ಕರ್ಚೀಫ್​​​​ಗಳನ್ನು ಕಟ್ಟುತ್ತಾರೆ. ಮಾಸ್ಕ್ ಉಪಯೋಗಿಸುವ ಮೊದಲು ಅದರ ಮಹತ್ವ ತಿಳಿಯಬೇಕು. ಏಕೆ ಅದನ್ನು ಧರಿಸಬೇಕು ಎಂಬುದು ನಮಗೆ ಅರಿವಿರಬೇಕು ಎನ್ನುತ್ತಾರೆ ಈ ನಟಿ.

Last Updated : Jul 11, 2020, 10:14 AM IST

ABOUT THE AUTHOR

...view details