ನಟನೆಯ ಹೊರತಾಗಿ ನಿರೂಪಣೆಯ ಮೂಲಕ ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಅನುಪಮಾ ಅವರು ಇದೀಗ ಮಜಾಭಾರತ ಕಾರ್ಯಕ್ರಮದ ನಿರೂಪಣೆಯಿಂದ ಹೊರಬಂದಿದ್ದು, ಅವರ ಜಾಗದಲ್ಲಿ ನಿರಂಜನ್ ದೇಶಪಾಂಡೆ, ಆರ್ ಜೆ ಸಿರಿ ಭಾಗವಹಿಸುತ್ತಿದ್ದಾರೆ.
ಪ್ರವಾಸ ಮುಗಿಸಿ ಮತ್ತೆ ನಟನೆಗೆ ಮರಳಿದ ಅನುಪಮಾಗೌಡ - ಪ್ರವಾಸ ಮುಗಿಸಿ ಮತ್ತೆ ನಟನೆಗೆ ಮರಳಿದ ಅನುಪಮಾಗೌಡ
ಕಲರ್ಸ್ ಕನ್ನಡದ ಅಕ್ಕ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ದ್ವಿಪಾತ್ರದಲ್ಲಿ ಅಭಿನಯಿಸಿ ಪರಿಚಿತರಾಗಿದ್ದ ಅನುಪಮಾ ಗೌಡ ಈಗಾಗಲೇ ಮಜಾಭಾರತ ಕಾರ್ಯಕ್ರಮದ ನಿರೂಪಣೆಯಿಂದ ಹೊರ ಬಂದಿದ್ದಾರೆ. ಈಗವರು ಮತ್ತೆ ನಟನೆಯತ್ತ ಮರಳಿದ್ದಾರೆ.
ಅನುಪಮಾಗೌಡ
'ನಾನು ಸುಮಾರು ಹತ್ತು ತಿಂಗಳಿನಿಂದ ಮಜಾಭಾರತ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದೇನೆ. ಆದರೆ ಇದೀಗ ನಾನು ನಿರೂಪಣೆಯಿಂದ ಹೊರ ಬರಲೇಬೇಕಾಗಿದೆ. ಇದಕ್ಕೆ ಮುಖ್ಯ ಕಾರಣ ನಟನೆ! ನಾನು ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಯಾವುದೇ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೇ, ನನಗೆ ನಿರೂಪಣೆ ಮತ್ತು ನಟನೆಯನ್ನು ಏಕಕಾಲದಲ್ಲಿ ನಿಭಾಯಿಸಿಕೊಂಡು ಹೋಗಲು ಕೂಡಾ ತುಂಬಾ ಕಷ್ಟವಾಗುತ್ತಿದೆ. ಈ ಕಾರಣದಿಂದ ನಿರೂಪಣೆಯಿಂದ ಹೊರಬರುವ ನಿರ್ಧಾರ ಮಾಡಿದ್ದೇನೆ' ಎಂದಿದ್ದಾರೆ ಅನುಪಮಾ.
TAGGED:
ನಟನೆಗೆ ಮರಳಿದ ಅನುಪಮಾಗೌಡ