'ಅಕ್ಕ' ಧಾರಾವಾಹಿಯಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ದ್ವಿಪಾತ್ರಗಳಿಗೆ ಜೀವ ತುಂಬುವ ಮೂಲಕ ನಟನಾ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದ್ದ ಚೆಂದುಳ್ಳಿ ಚೆಲುವೆ ಹೆಸರು ಅನುಪಮಾ ಗೌಡ. ಅಕ್ಕ ಧಾರಾವಾಹಿಯ ನಂತರ ಬಿಗ್ಬಾಸ್ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು.
ವಿಯೆಟ್ನಾಂದಲ್ಲಿ ಸೋಲೋ ಟ್ರಿಪ್ ಎಂಜಾಯ್ ಮಾಡುತ್ತಿರುವ ಅನುಪಮಾ ಗೌಡ - ಸೋಲೋ ಟ್ರಿಪ್ ಎಂಜಾಯ್ ಮಾಡುತ್ತಿರುವ ಅನುಪಮಾ ಗೌಡ
ಇಷ್ಟು ದಿನ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಮುದ್ದು ಮುಖದ ಚೆಲುವೆ ಇದೀಗ ಬಿಡುವು ಮಾಡಿಕೊಂಡು ಸೀದಾ ವಿದೇಶಕ್ಕೆ ಹಾರಿದ್ದಾರೆ. ದೂರದ ವಿಯೆಟ್ನಾಂಗೆ ಅನುಪಮಾ ಹೋಗಿದ್ದು ಒಂಟಿಯಾಗಿ ಅನ್ನೋದು ವಿಶೇಷ.
ಕನ್ನಡ ಕೋಗಿಲೆ ಸೀಸನ್ 1 ರ ನಿರೂಪಕಿಯಾಗಿ ಗಮನ ಸೆಳೆದ ಅನುಪಮಾ ಅವರಿಗೆ ನಿರೂಪಕಿಯಾಗಿ ಹೆಸರು ತಂದುಕೊಟ್ಟಿದ್ದು 'ಮಜಾ ಭಾರತ' ಕಾರ್ಯಕ್ರಮ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಭಾರತ ಕಾರ್ಯಕ್ರಮದ ನಿರೂಪಕಿಯಾಗಿ ಕಳೆದ ಹತ್ತು ತಿಂಗಳಿಂದ ಕಾಣಿಸಿಕೊಂಡಿದ್ದ ಅನುಪಮಾ ಇದೀಗ ಈ ಕಾರ್ಯಕ್ರಮದಿಂದ ಹೊರಬಂದಿದ್ದಾರೆ. ಇಷ್ಟು ದಿನ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಮುದ್ದು ಮುಖದ ಚೆಲುವೆ ಇದೀಗ ಬಿಡುವು ಮಾಡಿಕೊಂಡು ಸೀದಾ ವಿದೇಶಕ್ಕೆ ಹಾರಿದ್ದಾರೆ. ದೂರದ ವಿಯೆಟ್ನಾಂಗೆ ಅನುಪಮಾ ಹೋಗಿದ್ದು ಒಂಟಿಯಾಗಿ. ಇದೇ ಮೊದಲ ಬಾರಿ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಹೊರತಾಗಿ ಒಬ್ಬರೇ ಟ್ರಿಪ್ ಹೋಗಿದ್ದು ವಿಯೆಟ್ನಾಂನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ನನಗೆ ತುಂಬಾ ಖುಷಿಯಾಗುತ್ತಿದೆ. ಏಕೆಂದರೆ ಇದು ನನ್ನ ಮೊದಲ ಸೋಲೋ ಟ್ರಿಪ್. ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದೇನೆ ಎಂಬ ವಿಚಾರ ಮೊದಲಿಗೆ ಭಯ ತರಿಸಿದ್ದರೂ, ಪ್ರಯತ್ನ ಮಾಡುವ ಸಲುವಾಗಿ ಸೋಲೋ ಟ್ರಿಪ್ ಯೋಚನೆ ಮಾಡಿದೆ. ಅದಕ್ಕೆ ವಿಯೆಟ್ನಾಂಗೆ ಹೋಗಲು ತಯಾರಾದೆ. ಮಾತ್ರವಲ್ಲ ಇಡೀ ಟ್ರಿಪ್ ನ ಪ್ಲ್ಯಾನ್ ನಾನೊಬ್ಬಳೇ ಮಾಡಿದೆ. ವಿಯೆಟ್ನಾಂ ನ ಸುಂದರ ತಾಣದಲ್ಲಿ ಓಡಾಡುತ್ತಾ, ಹೊಸ ಸ್ನೇಹಿತರನ್ನು ಮಾಡಿಕೊಂಡಿದ್ದೇನೆ. ದೂರ ದೇಶದ ಹೊಸ ಸ್ನೇಹಿತರೊಡನೆ ಹೊಸ ವರ್ಷದ ಸಂಭ್ರಮ' ಎಂದು ಹೇಳಿರುವ ಅನುಪಮಾ ಇನ್ಸ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.