ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ತೆರೆಕಂಡು ಶತದಿನೋತ್ಸವ ಆಚರಿಸಿಕೊಂಡ ಅವರ ನಟನೆಯ ಯಜಮಾನ ಚಿತ್ರದ ಹಾಡೊಂದನ್ನು ಟೈಟಲ್ ಆಗಿ ಇಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ, ಸದ್ಯ ಇದು ಗಾಳಿ ಸುದ್ದಿ ಅಷ್ಟೇ ಆಗಿದ್ದು ಇನ್ನೂ ಕನ್ಫರ್ಮ್ ಆಗಿಲ್ಲ.
ದರ್ಶನ್ ಸಿನಿಮಾದ ಹಾಡಿನ ಲೈನ್ ಈಗ ಚಿತ್ರದ ಟೈಟಲ್!!! - Shivanandi
ಸ್ಯಾಂಡಲ್ವುಡ್ನ ಸರ್ದಾರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮತ್ತೊಂದು ಸಿನಿಮಾ ಟೈಟಲ್ ಫಿಕ್ಸ್ ಆಗಲಿದೆ. ಸದ್ಯ ಟೈಟಲ್ ಯಾವುದಿರಬಹುದು ಅನ್ನೋದು ಸಹ ಬಹಿರಂಗವಾಗಿದ್ದು, ದಚ್ಚು ತನ್ನ ಅಭಿಮಾನಿಗಳಿಗೆ ಸದ್ಯದಲ್ಲೇ ಒಂದು ಸಿಹಿ ಸುದ್ದಿ ಕೊಡಲಿದ್ದಾರೆ.

ಯೂಟ್ಯೂಬ್ನಲ್ಲಿ ಒಂದು ಮಿಲಿಯನ್ಗೂ ಹೆಚ್ಚು ಜನ ವೀಕ್ಷಣೆ ಮಾಡಿದ ಯಜಮಾನ ಚಿತ್ರದ ಶಿವನಂದಿ... ಎಂಬ ಹಾಡೇ ಇದೀಗ ಟೈಟಲ್ ಆಗುತ್ತಿದೆ. ದರ್ಶನ್ ಸಹೋದರ ದಿನಕರ್ ತೂಗುದೀಪ್ ಅಣ್ಣನಿಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶಿವನಂದಿ ಎಂಬ ಟೈಟಲ್ನ ರಿಜಿಸ್ಟರ್ ಮಾಡಿಸಿದ್ದಾರಂತೆ.
ಆದರೆ, ದಿನಕರ್, ದರ್ಶನ್ ಇಟ್ಟುಕೊಂಡು ಶಿವನಂದಿ ಸಿನಿಮಾವನ್ನು ಮಾಡ್ತಾರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಯಾಕಂದ್ರೆ, ದರ್ಶನ್ಗಾಗಿ ಸರ್ವಾಂತರ್ಯಾಮಿ ಎಂಬ ಚಿತ್ರ ಅನೌನ್ಸ್ ಆಗಿದ್ದು ಸಿನಿಮಾ ಆರಂಭವಾಗೋದ್ರಲ್ಲಿದೆ. ಹೀಗಿರ್ಬೇಕಾದ್ರೆ ಶಿವನಂದಿ ಟೈಟಲ್ ದರ್ಶನ್ ಸಿನಿಮಾಗೆ ಇಡ್ತಾರಾ ಅನ್ನೋದು ಗಾಂಧಿನಗರದ ಸಿನಿಮಾ ಪಂಡಿತರ ಪ್ರಶ್ನೆ!!