ಧಾರಾವಾಹಿ ಪಾತ್ರಧಾರಿಗಳು ಬದಲಾಗುವುದು ಹೊಸದೇನಲ್ಲ. ವೈಯಕ್ತಿಕ ವಿಚಾರಗಳಿಂದಲೋ ಅಥವಾ ಮತ್ತಾವುದೋ ಕಾರಣಕ್ಕೋ ಪಾತ್ರಧಾರಿಗಳು ಅರ್ಧದಲ್ಲೇ ಧಾರಾವಾಹಿ ತಂಡದಿಂದ ಹೊರಹೋಗುತ್ತಾರೆ. ಇದೀಗ 'ಯಾರೇ ನೀ ಮೋಹಿನಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಮುತ್ತುಮಾವ ಧಾರಾವಾಹಿಯಿಂದ ಹೊರ ಹೋಗುತ್ತಿದ್ದಾರೆ.
'ಯಾರೇ ನೀ ಮೋಹಿನಿ' ಮುತ್ತು ಮಾವನ ಜಾಗಕ್ಕೆ ಬಂದ್ರು ಮತ್ತೊಬ್ಬ ನಟ - ಕಿರುತೆರೆ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಾರೇ ನೀ ಮೋಹಿನಿ' ಧಾರಾವಾಹಿ ಪ್ರಮುಖ ಪಾತ್ರಧಾರಿ ಚೇತನ್ ವಿಕ್ಕಿ ಧಾರಾವಾಹಿಯಿಂದ ಹೊರ ಹೋಗಿದ್ದು, ಇದೀಗ ಅವರ ಪಾತ್ರವನ್ನು ಕುಲವಧು ಖ್ಯಾತಿಯ ಸೂರಜ್ ನಿಭಾಯಿಸುತ್ತಿದ್ದಾರೆ.
ಮುತ್ತುಮಾವನಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಚೇತನ್ ವಿಕ್ಕಿ ಇನ್ನು ಮುಂದೆ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮೊದಲ ಧಾರಾವಾಹಿಯಲ್ಲೇ ಸಾಕಷ್ಟು ಮೋಡಿ ಮಾಡಿದ ಚೇತನ್ ವಿಕ್ಕಿ ಅವರಿಗೆ ಬಾಲ್ಯದಿಂದಲೂ ತಾವೊಬ್ಬ ನಟನಾಗಿ ಮಿಂಚಬೇಕು ಎಂಬ ಹಂಬಲ. ಪದವಿ ವಿದ್ಯಾಭ್ಯಾಸದ ಬಳಿಕ ಆಡಿಶನ್ಗಳಲ್ಲಿ ಭಾಗವಹಿಸಲು ಆರಂಭಿಸಿದ ಚೇತನ್, ಧಾರಾವಾಹಿಯಲ್ಲಿ ನಾಯಕನಾಗಿ ಆಯ್ಕೆ ಆಗಿಯೇ ಬಿಟ್ಟರು. ಮುತ್ತುಮಾವನಾಗಿ ಹೆಸರು ಮಾಡಿದ ಚೇತನ್ ವಿಕ್ಕಿ ಇದೀಗ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಈಗಾಗಲೇ ಧಾರಾವಾಹಿ ಯಶಸ್ವಿಯಾಗಿ 600 ಎಪಿಸೋಡ್ಗಳನ್ನು ಪೂರೈಸಿದೆ. ಇದೀಗ ಹೊಸ ಮುತ್ತುಮಾವ ಧಾರಾವಾಹಿ ತಂಡ ಸೇರಿಕೊಂಡಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ಗೌರವ್ ಪಾತ್ರಧಾರಿಯಾಗಿ ಅಭಿನಯಿಸಿದ್ದ ಸೂರಜ್ ಇದೀಗ ಚೇತನ್ ಲಕ್ಕಿ ಸ್ಥಾನ ತುಂಬುತ್ತಿದ್ದಾರೆ. ಅವರ ಅಭಿನಯದ ಎಪಿಸೋಡ್ಗಳು ಈಗಾಗಲೇ ಆರಂಭವಾಗಿದ್ದು ಇವರು ವೀಕ್ಷಕರನ್ನು ಹೇಗೆ ಮೋಡಿ ಮಾಡಲಿದ್ದಾರೆ ಕಾದು ನೋಡಬೇಕು.