ಕರ್ನಾಟಕ

karnataka

ETV Bharat / sitara

ಪ್ರೇಮಲೋಕದ ಪ್ರೇರಣಾ ಆಗಿ ಮಿಂಚುತ್ತಿದ್ದಾರೆ ಅಂಕಿತಾ ನವ್ಯಾ ಗೌಡ - Premaloka serial

ಸೂರ್ಯನ ಮಾವನ ಜೊತೆ ಎಂಗೇಜ್​ಮೆಂಟ್​ಗೆ ರೆಡಿಯಾಗಿರುವ ಪ್ರೇರಣಾ ಸೂರ್ಯನೊಂದಿಗೆ ರಿಂಗ್ ಹಾಕಿಸಿಕೊಂಡಿದ್ದಾರೆ. ಇಬ್ಬರ ಮಧ್ಯೆ ಇದೀಗ ಪ್ರೀತಿ ಚಿಗುರೊಡೆಯುತ್ತಿದೆ. ಮುಂದೆ ಪ್ರೇಮಲೋಕದಲ್ಲಿ ಏನೆಲ್ಲ ಆರಂಭವಾಗಲಿದೆ ಎಂಬುದನ್ನು ಕಾದು ನೋಡಬೇಕು..

ಅಂಕಿತಾ ನವ್ಯಾ ಗೌಡ

By

Published : Sep 11, 2019, 10:18 AM IST

ಇಂಜಿನಿಯರಿಂಗ್ ಪದವೀಧರೆಯಾಗಿರುವ ಅಂಕಿತಾ ನವ್ಯಾ ಗೌಡ ಕಿರುತೆರೆಗೆ ಪರಿಚಿತ ಮುಖ. ಅಂಕಿತಾ ನವ್ಯಾ ಗೌಡ ಎಂದರೆ ಯಾರಪ್ಪಾ ಎಂದು ಆಲೋಚಿಸುತ್ತೀದ್ದೀರಾ ಹಾಗಿದ್ದರೆ ಇಲ್ಲಿ ಕೇಳಿ. ಅವಳೇ ಪ್ರೇಮಲೋಕದ ಪ್ರೇರಣಾ...

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಗುಳಿ ಕೆನ್ನೆಯ ಹುಡುಗ ವಿಜಯ್ ಸೂರ್ಯ ನಾಯಕ ನಟನಾಗಿ ಅಭಿನಯಿಸಿರುವ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಾಯಕಿ ಪ್ರೇರಣಾ ಪಾತ್ರಕ್ಕೆ ಜೀವ ತುಂಬುತ್ತಿರುವ ಮಹಾನಗರಿಯ ಚೆಲುವೆಯ ಹೆಸರೇ ಅಂಕಿತಾ ನವ್ಯಾ ಗೌಡ.

ಮಾಡೆಲಿಂಗ್ ಕ್ಷೇತ್ರದತ್ತ ವಿಶೇಷ ಒಲವು ಮೂಡಿಸಿಕೊಂಡಿದ್ದ ಅಂಕಿತಾ ಹಿಂದೆ ಸಾಕಷ್ಟು ರ್ಯಾಂಪ್ ವಾಕ್​ಗಳಲ್ಲಿ ಮಿಂಚಿದರು. ಯಾವತ್ತೂ ಸುಮ್ಮನೆ ಕುಳಿತಿರಬಾರದು. ಏನಾದರೂ ಮಾಡುತ್ತಲೇ ಇರಬೇಕು ಎಂಬುದೇ ನನ್ನ ಪಾಲಿಸಿ ಅನ್ನುವ ಅಂಕಿತಾ ಬಣ್ಣದ ಲೋಕಕ್ಕೆ ಆಕಸ್ಮಿಕವಾಗಿ ಬಂದವರು.

ಪ್ರೇಮಲೋಕ ಧಾರಾವಾಹಿಯಲ್ಲಿ ವಿಜಯ್​ ಹಾಗೂ ಅಂಕಿತಾ

ಪ್ರೇಮಲೋಕದ ಪ್ರೇರಣಾ ಆಗಿ ಅಂಕಿತ ಬದಲಾಗಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಮಾಡೆಲಿಂಗ್. ಮಾಡೆಲಿಂಗ್ ಮೂಲಕ ಸಾಕಷ್ಟು ಜನರ ಮನ ಸೆಳೆದಿರುವ ಅಂಕಿತಾ ಬೆಂಗಳೂರು ಫ್ಯಾಷನ್ ವೀಕ್​ನಲ್ಲಿ ಸತತ ಮೂರು ವರ್ಷ ಭಾಗವಹಿಸಿದ್ದರು. ಮಾಡೆಲಿಂಗ್​ನ ಜೊತೆಗೆ ಧಾರಾವಾಹಿಯ ಆಡಿಶನ್​ಗಳಲ್ಲೂ ಅಂಕಿತಾ ಕಾಣಿಸಿಕೊಂಡರು.

ಬಯಸದೇ ಬಂದ ಅವಕಾಶ ಎನ್ನುವುದು ಇದಕ್ಕೆ ಇರಬೇಕು. ಸ್ಟಾರ್ ಸುವರ್ಣ ವಾಹಿನಿಯಿಂದ ಆಡಿಶನ್​ನಲ್ಲಿ ಭಾಗವಹಿಸುವಂತೆ ಕಾಲ್ ಬಂದಿತ್ತು. ಮುಂದೆ ಆಡಿಶನ್ ನಲ್ಲಿ ನಡೆದ ಎಲ್ಲಾ ಟೆಸ್ಟ್​ಗಳಲ್ಲಿ ಉತ್ತೀರ್ಣರಾದ ಅಂಕಿತಾ ಇಂದು ಪ್ರೇಮಲೋಕದ ಪ್ರೇರಣಾ ಆಗಿ ರಂಜಿಸುತ್ತಿದ್ದಾರೆ.

ಇದೀಗ ಸೂರ್ಯ ಮಾವನ ಜೊತೆ ಎಂಗೇಜ್​ಮೆಂಟ್​ಗೆ ರೆಡಿಯಾಗಿರುವ ಪ್ರೇರಣಾ ಸೂರ್ಯನೊಂದಿಗೆ ರಿಂಗ್ ಹಾಕಿಸಿಕೊಂಡಿದ್ದಾರೆ. ಇಬ್ಬರ ಮಧ್ಯೆ ಇದೀಗ ಪ್ರೀತಿ ಚಿಗುರೊಡೆಯುತ್ತಿದೆ. ಮುಂದೆ ಪ್ರೇಮಲೋಕದಲ್ಲಿ ಎನೆಲ್ಲ ಆಗುತ್ತೆ ಅನ್ನೋದನ್ನು ಕಾದು ನೋಡಬೇಕು.

ABOUT THE AUTHOR

...view details