ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ 'ಪ್ರೇಮಲೋಕ'ದ ನಾಯಕಿ ಯಾರೆಂಬುದು ರಿವೀಲ್ ಆಗಿದೆ. ಗುಳಿ ಕೆನ್ನೆಯ ಚೆಲುವ ವಿಜಯ್ ಸೂರ್ಯಗೆ ಅಂಕಿತ ನವ್ಯಾಗೌಡ ನಾಯಕಿಯಾಗಿ ನಟಿಸಲಿದ್ದಾರೆ.
'ಪ್ರೇಮಲೋಕ'ದಲ್ಲಿ ವಿಜಯ್ ಸೂರ್ಯ ಜೊತೆಯಾಗುತ್ತಿದ್ದಾರೆ ಅಂಕಿತ ನವ್ಯಾಗೌಡ - undefined
'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಪ್ರೇಮಲೋಕ ಧಾರಾವಾಹಿಗೆ ಅಂಕಿತ ನವ್ಯಾಗೌಡ ಎಂಬ ಚೆಲುವೆ ನಾಯಕಿಯಾಗಿ ಬಂದಿದ್ದಾರೆ. ಅಂಕಿತಗೆ ಇದು ಮೊದಲ ಧಾರಾವಾಹಿ.
ವಾಹಿನಿ ಇತ್ತೀಚೆಗೆ ಎರಡನೇ ಪ್ರೋಮೋ ಬಿಡುಗಡೆ ಮಾಡಿದೆ. ಬಣ್ಣಗಳ ರಂಗಿನಲ್ಲಿ ಅಂಕಿತ ನವ್ಯಾಗೌಡ ಅವರನ್ನು ಪರಿಚಯ ಮಾಡಲಾಗಿದೆ. ಮೊದಲ ಪ್ರೋಮೋದಲ್ಲಿ ವಿಜಯ್ ಗಿಟಾರ್ ಹಿಡಿದು ಬಂದಿದ್ದರು. ಹಿಂದಿಯ ಜನಪ್ರಿಯ 'ಕಸೂತಿ ಜಿಂದಗಿ ಕೇ' ಧಾರಾವಾಹಿ ರೀಮೇಕ್ ಈ 'ಪ್ರೇಮಲೋಕ'. ಧಾರಾವಾಹಿಯ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಬಾಲರಾಜ್, ವಾಣಿಶ್ರೀ ಹಾಗೂ ಇನ್ನಿತರರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ವಿಜಯ ಸೂರ್ಯ 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಮನೆ ಮಾತಾದವರು. ಆ ಧಾರಾವಾಹಿಯಲ್ಲಿ 5 ವರ್ಷಗಳು ಅಭಿನಯಿಸಿದ ಬಳಿಕ ಹೊರಬಂದು ಇದೀಗ 'ಪ್ರೇಮಲೋಕ ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಂಕಿತ ಅವರಿಗೆ ಕೂಡಾ ಇದು ಮೊದಲ ಧಾರಾವಾಹಿ.