'ಕಮಲಿ' ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಆ್ಯಕ್ಟಿಂಗ್ ಆರಂಭಿಸಿದ ರಚನಾ ಸ್ಮಿತ್, ಮೊದಲ ಧಾರಾವಾಹಿಯಲ್ಲೇ ಯಶಸ್ಸು ಪಡೆದಿದ್ದಾರೆ. ಅನಿಕಾ ಪಾತ್ರದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ರಚನಾ ಸಂಪಾದಿಸಿದ್ದಾರೆ.
ಅನಿಕಾ ಬಣ್ಣದ ಬದುಕಿಗೆ ಬಂದು 9 ವರ್ಷಗಳು ಕಳೆದರೂ ಅವರಿಗೆ ಬ್ರೇಕ್ ನೀಡಿದ್ದು ಅನಿಕಾ ಪಾತ್ರ. ನಾಯಕಿ ಕಮಲಿಗೆ ಒಂದರ ಮೇಲೊಂದು ಕಷ್ಟ ಕೊಡುವ ಅನಿಕಾಗೆ ನಾಯಕ ರಿಷಿಯನ್ನು ಪಡೆಯುವ ಹಂಬಲ. ರಿಷಿ ತನಗೆ ಸಿಗಬೇಕು, ಅವನನ್ನು ತಾನೇ ಮದುವೆಯಾಗಬೇಕು ಎಂಬ ಹುಚ್ಚು ಆಸೆ ಹೊಂದಿರುವ ಅನಿಕಾ ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ. ಇದಕ್ಕಾಗಿ ಆಕೆ ಕಮಲಿಗೆ ಸಾಕಷ್ಟು ಕಷ್ಟ ಕೊಡುತ್ತಾಳೆ. ಅನಿಕಾ ಪಾತ್ರಕ್ಕೆ ಜೀವ ತುಂಬುತ್ತಿದ್ದ ರಚನಾಗೆ ಕೆಲವರು ಮಾತ್ರ ಪ್ರಶಂಸೆ ವ್ಯಕ್ತಪಡಿಸಿದರೆ ಉಳಿದವರೆಲ್ಲಾ ಬೈದು ಕಮೆಂಟ್ ಮಾಡುತ್ತಿದ್ದರಂತೆ.
ಬೆಳ್ಳಿತೆರೆಯಲ್ಲೂ ಮಿಂಚಿರುವ ರಚನಾ ರಚನಾಗೆ ಇದರಿಂದ ಭಯವಾಗಿದ್ದು ನಿಜ. ಅದೇ ಕಾರಣದಿಂದ ಅವರು ಸಾಮಾಜಿಕ ಜಾಲತಾಣ ಬಳಸುವುದನ್ನೇ ಬಿಟ್ಟರು. ಒಂದಲ್ಲಾ ಎರಡಲ್ಲಾ ಬರೋಬ್ಬರಿ 6 ತಿಂಗಳ ಕಾಲ ರಚನಾ ಸೋಷಿಯಲ್ ಮೀಡಿಯಾದಿಂದ ದೂರ ಉಳಿದರು. ನಂತರ ಜನರು ಏಕೆ ನನ್ನನ್ನು ದೂರುತ್ತಿದ್ದರು ಎಂಬುದು ಆಕೆಗೆ ಅರಿವಾಯಿತು. ಜನರು ಇಷ್ಟು ಬೈಯ್ಯುತ್ತಿದ್ದಾರೆ ಎಂದರೆ ನನ್ನ ಪಾತ್ರ ಅವರಿಗೆ ಬಹಳ ಇಷ್ಟವಾಗಿದೆ ಎಂಬ ವಿಚಾರ ತಿಳಿದು ರಚನಾಗೆ ಬಹಳ ಖುಷಿ ಆಗಿದೆಯಂತೆ.
ವರದನಾಯಕ , ವಿಕ್ಟರಿ ಸಿನಿಮಾಗಳಲ್ಲಿ ಕೂಡಾ ನಟಿಸಿರುವ ರಚನಾ ಸ್ಮಿತ್, ಕಿರುತೆರೆಗೆ ಬಂದಿದ್ದು ರಿಯಾಲಿಟಿ ಶೋ ಮೂಲಕ. ಲೈಫ್ ಸೂಪರ್ ಗುರು ಶೋ ಮೂಲಕ ಕಿರುತೆರೆಗೆ ಬಂದ ರಚನಾ ಸದ್ಯ ಈಗ ಕಮಲಿಯ ಅನಿಕಾ ಆಗಿ ನಟನೆ ಆರಂಭಿಸಿದರು. 'ನಾನಿಂದು ಅನಿಕಾ ಆಗಿ ಹೆಸರು ಗಳಿಸಿದ್ದೇನೆ, ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದೇನೆ ಎಂದರೆ ಅದಕ್ಕೆ ಅಮ್ಮ ನೀಡಿದ ಪ್ರೋತ್ಸಾಹ, ಬೆಂಬಲವೇ ಕಾರಣ' ಎಂದು ಹೇಳುವ ರಚನಾಗೆ ತೆಲುಗಿನಿಂದಲೂ ನಟಿಸುವ ಅವಕಾಶಗಳು ಸಿಗುತ್ತಿದೆ. ಆದರೆ ಕೊರೊನಾ ಇರುವುದರಿಂದ ಟ್ರಾವೆಲ್ ಮಾಡುವುದು ಅಪಾಯ ಎಂದು ತಿಳಿದು ಅನಿಕಾ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿಲ್ಲ.
6 ತಿಂಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರವಿದ್ದ ಕಮಲಿ ವಿಲನ್