ಬಿಗ್ಬಾಸ್ ಸೀಸನ್ 8 ಸದ್ಯದಲ್ಲೇ ಆರಂಭವಾಗಲಿದೆ. ಬಿಗ್ಬಾಸ್ 7ರ ಮಾಜಿ ಸ್ಪರ್ಧಿ ಹಾಗೂ ನಿರೂಪಕಿ ಚೈತ್ರಾ ವಾಸುದೇವನ್ ಈ ಶೋನ ಹೊಸ ಸೀಸನ್ ಬರುತ್ತಿರುವುದಕ್ಕೆ ಉತ್ಸುಕರಾಗಿದ್ದಾರೆ. ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ದೀರ್ಘ ವಿರಾಮದ ನಂತರ ಈ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ಮುಂದಿನ ಸೀಸನ್ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಕಾತರದಿಂದ ಕಾಯುತ್ತಿದ್ದಾರೆ.
ಬಿಗ್ಬಾಸ್ -8 ಸ್ಪರ್ಧಿಗಳ ಬಗ್ಗೆ ಕುತೂಹಲ ವ್ಯಕ್ತಪಡಿಸಿದ ನಿರೂಪಕಿ ಚೈತ್ರಾ ವಾಸುದೇವನ್ - Anchor Chaitra Vasudevan
ಈ ಸೀಸನ್ನಲ್ಲಿ ಯಾರೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಯಲು ನಿರೂಪಕಿ ಚೈತ್ರಾ ವಾಸುದೇವ್ ಕಾತರದಿಂದ ಕಾಯುತ್ತಿದ್ದಾರೆ. ಫೆಬ್ರವರಿ 28 ರಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಬಿಗ್ಬಾಸ್ -8 ಆರಂಭವಾಗಲಿದೆ.

ಇದನ್ನೂ ಓದಿ:ಉಡುಪಿ ಕಡಲ ತೀರದಲ್ಲಿ ನಿಧಿಮಾ ಜೊತೆಗೆ ರೊಮ್ಯಾನ್ಸ್ ಮಾಡಿದ ಪೃಥ್ವಿ ಅಂಬರ್...!
ಈ ಬಗ್ಗೆ ಮಾತನಾಡಿರುವ ಚೈತ್ರಾ,"ತುಂಬಾ ಸಮಯದ ನಂತರ ಬಿಗ್ ಬಾಸ್ ಬರುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕಿಚ್ಚ ಸುದೀಪ್ ನಿರೂಪಣೆ ನೋಡುವುದೇ ಒಂದು ಹಬ್ಬ. ಸ್ಪರ್ಧಿಗಳ ಕುರಿತು ತಿಳಿಯಲು ನಾನು ಉತ್ಸುಕಳಾಗಿದ್ದೇನೆ. ಕಳೆದ ಸೀಸನ್ಗಳಂತೆ ಈ ಬಾರಿ ಕೂಡಾ ಸ್ಪರ್ಧಿಗಳಲ್ಲಿ ಒಬ್ಬರು ನಿರೂಪಕರಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟವಂತ ನಿರೂಪಕರು ಯಾರೆಂಬುದನ್ನು ತಿಳಿಯಲು ಕಾತರದಿಂದ ಕಾಯುತ್ತಿದ್ದೇನೆ. ಸೋಷಿಯಲ್ ಮೀಡಿಯಾ ಮೂಲಕ ಹಲವಾರು ಪ್ರತಿಭಾವಂತರು ಜನರಿಗೆ ಪರಿಚಯವಾಗಿದ್ದಾರೆ. ಇವರಲ್ಲಿ ಯಾರಾದರೂ ಸ್ಪರ್ಧಿಯಾಗಿ ಹೋದರೆ ಚೆನ್ನಾಗಿರುತ್ತದೆ. ನಮ್ಮನ್ನು ಗುರುತಿಸಿಕೊಳ್ಳಲು ಬಿಗ್ಬಾಸ್ ಸೂಕ್ತ ವೇದಿಕೆ. ನಿವೇದಿತಾ ಗೌಡ ಬಿಗ್ಬಾಸ್ ಮನೆಗೆ ಹೋಗಿ ಬಂದ ನಂತರ ಅದೇ ರೀತಿಯ ಪ್ರತಿಭಾವಂತರು ಬಿಗ್ಬಾಸ್ನಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅಂತವರಿಗೆ ಭಾಗವಹಿಸುವ ಅವಕಾಶ ದೊರೆಯಬೇಕು" ಎಂದು ಚೈತ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.