ಕಿರುತೆರೆಯ ರಾಘವೇಂದ್ರ ಮತ್ತು ಅಮೃತಾ ರಾಮಮೂರ್ತಿಗೆ ಇಂದು ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ. 2019 ಮೇ 13 ರಂದು ಗುರು ಹಿರಿಯರ, ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅಮೃತಾ ಮತ್ತು ರಾಘವೇಂದ್ರ ಅವರದ್ದು ಪ್ರೇಮ ವಿವಾಹ ಕೂಡಾ ಹೌದು.
ರೀಲ್ ಲೈಫ್ನಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ ಇದೀಗ ರಿಯಲ್ ಲೈಫ್ನಲ್ಲಿ ಕೂಡಾ ಒಂದಾಗಿದ್ದು ಆಗಲೇ ಒಂದು ವರ್ಷ ಯಶಸ್ವಿ ದಾಂಪತ್ಯ ಜೀವನ ಪೂರೈಸಿದ್ದಾರೆ. ಈಗ ಲಾಕ್ಡೌನ್ನಲ್ಲಿ ಖುಷಿಯಿಂದ ಸಮಯ ಕಳೆಯುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕನಾಗಿ ರಾಘವೇಂದ್ರ ನಟಿಸಿದ್ದರೆ ನಾಯಕಿಯಾಗಿ ಅಮೃತಾ ಬಣ್ಣ ಹಚ್ಚಿದ್ದರು. ಧಾರಾವಾಹಿ ಶೂಟಿಂಗ್ ಸಮಯದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ರಾಘವೇಂದ್ರ ಮತ್ತು ಅಮೃತಾ ಧಾರಾವಾಹಿ ಮುಗಿದ ನಂತರ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದರು. ಆ ನಡುವೆ ಒಬ್ಬರೊಬ್ಬನ್ನೊರು ಮಿಸ್ ಮಾಡಿಕೊಳ್ಳುವಾಗಲೇ ತಿಳಿದದ್ದು ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಅಂತ.