ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ಅಮೃತಾ ರಾಮಮೂರ್ತಿ ಅಭಿನಯಿಸುತ್ತಿದ್ದರು. ಇದೀಗ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ಮೃದುಲಾ ಈ ಧಾರಾವಾಹಿ ಬಿಟ್ಟು ಬೇರೆ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ, ಬದಲಿಗೆ ಅವರು ಆ್ಯಕ್ಟಿಂಗ್ನಿಂದ ಕೆಲವು ದಿನಗಳ ಕಾಲ ಬ್ರೇಕ್ ಪಡೆಯುತ್ತಿದ್ದಾರೆ.
ಕಸ್ತೂರಿ ನಿವಾಸದಿಂದ ಹೊರಬಂದ ಅಮೃತಾ....ಮೃದುಲಾ ಪಾತ್ರಕ್ಕೆ ಯಾವ ನಟಿ ಬರಲಿದ್ದಾರೆ...? - Kasturi Nivasa Serial
'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಮೃದುಲಾ ಪಾತ್ರದಲ್ಲಿ ನಟಿಸುತ್ತಿದ್ದ ಅಮೃತಾ ರಾಮಮೂರ್ತಿ ಇದೀಗ ಆ ಪಾತ್ರದಿಂದ ಹೊರ ಬಂದಿದ್ದಾರೆ. ಈ ಕಾರಣದಿಂದ ಧಾರಾವಾಹಿ ತಂಡ ಮೃದುಲಾ ಪಾತ್ರವನ್ನು ಅಂತ್ಯಗೊಳಿಸುವ ನಿರ್ಧಾರ ಮಾಡಿದೆ.
ಇದನ್ನೂ ಓದಿ:ತಾಯಿಗೆ ಕ್ಯಾನ್ಸರ್.. ಪ್ರಾರ್ಥನೆ ಮಾಡಿ ಎಂದು ಅಭಿಮಾನಿಗಳ ಬಳಿ ರಾಖಿ ಸಾವಂತ್ ಮನವಿ!
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಮೃತಾ, "ನನ್ನ ಬಣ್ಣದ ಪಯಣಕ್ಕೆ ಇದೀಗ ಏಳರ ಹರೆಯ. ಏಳು ವರ್ಷಗಳಿಂದ ನಾನು ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿದ್ದೇನೆ. ಇದೀಗ ಕೊಂಚ ಬ್ರೇಕ್ ಪಡೆದುಕೊಂಡು ಮನೆ, ಕುಟುಂಬಸ್ಥರ ಜೊತೆಗೆ ಕಾಲ ಕಳೆಯಬೇಕು ಎಂದು ನಿರ್ಧರಿಸಿದ್ದೇನೆ. ಅದೇ ಕಾರಣದಿಂದ ಕಸ್ತೂರಿ ನಿವಾಸದಿಂದ ನಾನು ಹೊರಬಂದೆ" ಎಂದು ಅಮೃತಾ ಹೇಳಿಕೊಂಡಿದ್ದಾರೆ. 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಈ ಹಿಂದೆ ನಾಯಕಿ ಮೃದುಲಾ ಆಗಿ ವರ್ಷ ಕಾಂತರಾಜ್ ಬಣ್ಣ ಹಚ್ಚಿದ್ದರು. ಕಾರಣಾಂತರಗಳಿಂದ ವರ್ಷ, ಮೃದುಲಾ ಪಾತ್ರದಿಂದ ಹೊರನಡೆದಾಗ ಆ ಜಾಗಕ್ಕೆ ಬಂದವರೇ ಅಮೃತಾ ರಾಮಮೂರ್ತಿ. ಮೃದುಲಾ ಆಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಅಮೃತಾ ಕೂಡಾ ಇದೀಗ ಈ ಪಾತ್ರದಿಂದ ಹೊರಬಂದಿದ್ದಾರೆ. ಅಮೃತಾ ರಾಮಮೂರ್ತಿ ಧಾರಾವಾಹಿಯಿಂದ ಹೊರಬಂದ ಕಾರಣ ಧಾರಾವಾಹಿ ತಂಡ ಇದೀಗ ಮೃದುಲಾ ಪಾತ್ರವನ್ನೇ ಅಂತ್ಯಗೊಳಿಸುವ ನಿರ್ಧಾರ ಮಾಡಿದ್ದಾರೆ. ನಾಯಕಿ ಮೃದುಲಾಳೇ ತನ್ನ ಪ್ರಾಣ, ಜೀವ ಎಂದು ಅಂದುಕೊಂಡಿರುವ ನಾಯಕ ರಾಘವ್ ಬಾಳಲ್ಲಿ ಇನ್ಮುಂದೆ ಮೃದುಲಾ ಇರುವುದಿಲ್ಲ. ಮೃದುಲಾ ನಂತರ ರಾಘವ್ ಬಾಳಲ್ಲಿ ಯಾರ ಪ್ರವೇಶವಾಗಲಿದೆ ಎಂಬ ಕುತೂಹಲಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಲಿದೆ.