ಕರ್ನಾಟಕ

karnataka

ETV Bharat / sitara

ಕಿರುತೆರೆಯಲ್ಲಿ ಜ್ಯೂ.ರೆಬಲ್ ಸ್ಟಾರ್​​ 'ಅಮರ್​' ಸಿನಿಮಾ - Amar Cinema

ರೆಬಲ್ ಸ್ಟಾರ್ ಅಂಬರೀಶ್​​ಅವರ ಪುತ್ರ ಅಭಿಷೇಕ್​ ಅಭಿನಯದ ಮೊದಲ ಸಿನಿಮಾ ಅಮರ್​, ಉದಯ ಟಿವಿಯಲ್ಲಿ ಆಗಸ್ಟ್ 10ರಂದು ಪ್ರಸಾರವಾಗಲಿದೆ.

ಅಭಿಷೇಕ್​ ಅಭಿನಯದ ಮೊದಲ ಸಿನಿಮಾ ಅಮರ್

By

Published : Aug 8, 2019, 5:48 PM IST

ಜ್ಯೂ.ರೆಬಲ್ ಸ್ಟಾರ್ ಅಭಿಷೇಕ್​ ಅವರು ಅಭಿನಯಿಸಿರುವ ಮೊದಲ ಸಿನಿಮಾ ಅಮರ್ ಚಿತ್ರ ಇದೀಗ ಕಿರುತೆರೆಯಲ್ಲಿ ಪ್ರಪಥಮ ಬಾರಿಗೆ ಪ್ರಸಾರವಾಗುತ್ತಿದೆ.

ಆಗಸ್ಟ್ 10ರಂದು ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಮೊಟ್ಟಮೊದಲ ಬಾರಿಗೆ ಪ್ರಸಾರಗೊಳ್ಳಲಿದೆ. ಈ ಚಿತ್ರದಲ್ಲಿ ನಾಯಕನಾಗಿ ಅಭಿಷೇಕ್​ ಅಂಬರೀಶ್​ ಹಾಗೂ ನಾಯಕಿಯಾಗಿ ತಾನ್ಯಾ ಹೋಪ್ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೈನಾ ಖ್ಯಾತಿಯ ನಾಗಶೇಖರ್ ಅಮರ್ ಚಿತ್ರವನ್ನು ನಿರ್ದೇಶಿಸಿದ್ದು, ಕಳೆದ ಮೇ ತಿಂಗಳ 31ರಂದು ಬಿಡುಗಡೆಯಾಗಿತ್ತು. ಈ ಸಿನಿಮಾಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು.

ABOUT THE AUTHOR

...view details