ಅಕುಲ್ ಬಾಲಾಜಿ ಬಗ್ಗೆ ಗೊತ್ತಿಲ್ಲದವರಾರು ಹೇಳಿ...? ನಿರೂಪಣೆ ಮೂಲಕ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ಅಕುಲ್ ಬಾಲಾಜಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತಕಧಿಮಿತ ಡ್ಯಾನ್ಸ್ ಶೋ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ನಂತರ ಯಾವುದೇ ಕಿರುತೆರೆಯಲ್ಲಿ ಕಾಣಿಸಿಕೊಳ್ಳದ ಅವರು ಈಗ ಮತ್ತೆ ಹೊಸ ಕಾರ್ಯಕ್ರಮ ಮಾಡುತ್ತಿದ್ದಾರೆ.
ಹೊಸ ಕಾರ್ಯಕ್ರಮದ ಮೂಲಕ ಮತ್ತೆ ದರ್ಶನ್ ನೀಡಲಿರುವ ಅಕುಲ್ ಬಾಲಾಜಿ - Takadhimita Dancing show
ಹೊಸ ಕುಕಿಂಗ್ ಶೋ 'ಕಾಮಿಡಿ ವಿತ್ ಕಿರಿಕ್' ಮೂಲಕ ಅಕುಲ್ ಬಾಲಾಜಿ ಮತ್ತೆ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಕಧಿಮಿತ ಡ್ಯಾನ್ಸ್ ಶೋ ನಂತರ ಅವರು ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ.
ಇದನ್ನೂ ಓದಿ:ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ತ್ರಿಕೋನ ಟೀಸರ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಸ ಕುಕಿಂಗ್ ಶೋ 'ಕಾಮಿಡಿ ವಿತ್ ಕಿರಿಕ್' ನಿರೂಪಕರಾಗಿ ಅಕುಲ್ ಬಾಲಾಜಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಶೋನಲ್ಲಿ ಅಕುಲ್ ಬಾಲಾಜಿ ಅವರೊಂದಿಗೆ ಸಿಹಿ ಕಹಿ ಚಂದ್ರು ಕೂಡಾ ಸಾಥ್ ನೀಡಲಿದ್ದಾರೆ. " ಇದು ಒಂದು ಫನ್ ಶೋ . ಇದರಲ್ಲಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯರು ಕೂಡಾ ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಸಿಹಿ ಕಹಿ ಚಂದ್ರು ಅವರ ಜೊತೆ ಅಡುಗೆ ಮಾಡಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದೇನೆ. ವೀಕ್ಷಕರು ಈ ಕಾರ್ಯಕ್ರಮವನ್ನು ಇಷ್ಟ ಪಡುತ್ತಾರೆ ಎಂದು ಭಾವಿಸಿದ್ದೇನೆ" ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ.