ಕರ್ನಾಟಕ

karnataka

ETV Bharat / sitara

ತೆಲುಗು, ತಮಿಳು ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಕನ್ನಡತಿ - Aishwarya pisse in telugu serials

'ಅನುರೂಪ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಐಶ್ವರ್ಯ ಪಿಸ್ಸೆ ಈಗ ತೆಲುಗು, ತಮಿಳು ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ. 'ಸರ್ವಮಂಗಳ ಮಾಂಗಲ್ಯೇ' ಪ್ರಸಾರ ನಿಲ್ಲಿಸಿದ್ದು ಸದ್ಯಕ್ಕೆ ಐಶ್ವರ್ಯ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.

Aishwarya Pissy
ಐಶ್ವರ್ಯ ಪಿಸ್ಸೆ

By

Published : Sep 17, 2020, 5:38 PM IST

ಕನ್ನಡದೊಂದಿಗೆ ತೆಲುಗು, ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಐಶ್ವರ್ಯ ಪಿಸ್ಸೆ ತೆಲುಗಿನಲ್ಲಿ ಆರಂಭವಾಗಿರುವ 'ಕಸ್ತೂರಿ' ಎಂಬ ಧಾರಾವಾಹಿಯಲ್ಲಿ ಡಾಕ್ಟರ್ ಆಗಿ ನಟಿಸುತ್ತಿದ್ದಾರೆ. ಈ ವಿಚಾರವನ್ನು ಐಶ್ವರ್ಯ ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ಕಿರುತೆರೆ ನಟಿ ಐಶ್ವರ್ಯ ಪಿಸ್ಸೆ

ಐಶ್ವರ್ಯಾಗೆ ತೆಲುಗು ಕಿರುತೆರೆ ಹೊಸದೇನಲ್ಲ. ಇದಕ್ಕೂ ಮುನ್ನ ತೆಲುಗಿನ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಐಶ್ವರ್ಯ ಗೌರಿಯಾಗಿ ನಟಿಸಿದ್ದರು. 'ಪುನರ್ ವಿವಾಹ' ಧಾರಾವಾಹಿಯ ಸಣ್ಣ ಪಾತ್ರದ ಮೂಲಕ ಕಿರುತೆರೆಗೆ ಬಂದ ಐಶ್ವರ್ಯ ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಂಡಿದ್ದು 'ಅನುರೂಪ' ಧಾರಾವಾಹಿಯಲ್ಲಿ. ಅನುರೂಪದಲ್ಲಿ ಮೇಘನಾ ಆಗಿ ನಟಿಸಿದ ನಂತರ ಪೌರಾಣಿಕ ಧಾರಾವಾಹಿಯಲ್ಲೂ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಿರಿಜಾ ಕಲ್ಯಾಣ'ದಲ್ಲಿ ಅಭಿನಯಿಸಿದ ಐಶ್ವರ್ಯಾ ಮತ್ತೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಟಿಸಿ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾದಲ್ಲಿ ಯಶ್ ತಂಗಿಯಾಗಿ ಕಾಣಿಸಿಕೊಂಡಿದ್ದರು.

'ಅನುರೂಪ' ಧಾರಾವಾಹಿ ಮೂಲಕ ಕಿರುತೆರೆ ಎಂಟ್ರಿ

ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಬೇಕು ಎಂಬ ಆಸೆ ಹೊಂದಿರುವ ಈಕೆ ತಮಿಳು ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಕೊರೊನಾ ಕಾರಣದಿಂದ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿ ಪ್ರಸಾರ ನಿಲ್ಲಿಸಿದ್ದು ಐಶ್ವರ್ಯ ತೆಲುಗು ಕಿರುತೆರೆಯತ್ತ ಮುಖ ಮಾಡಿದ್ದಾರೆ.

ತೆಲುಗು, ತಮಿಳು ಕಿರುತೆರೆಯಲ್ಲೂ ಗುರುತಿಸಿಕೊಂಡಿರುವ ನಟಿ

ABOUT THE AUTHOR

...view details