ಕರ್ನಾಟಕ

karnataka

ETV Bharat / sitara

ಡಿಗ್ಲಾಮರ್​ ಲುಕ್​ನಲ್ಲಿ ಕಿರುತೆರೆಯಲ್ಲಿ ಬರ್ತಾರೆ 'ಸುಂದರಿ' ಐಶ್ವರ್ಯ ಪಿಸ್ಸೆ - ಸುಂದರಿ ಧಾರಾವಾಹಿ

ಸುಂದರಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆತಾಗ ಐಶ್ವರ್ಯ ನಟಿಸುವುದಿಲ್ಲ ಎಂದಿದ್ದರು. ಯಾಕೆಂದರೆ, ಸುಂದರಿ ಪಾತ್ರ ನಿಜಕ್ಕೂ ತುಂಬಾ ಭಿನ್ನವಾಗಿತ್ತು. ಆದ ಕಾರಣ ನಾನು ಒಪ್ಪಿಕೊಳ್ಳಲಿಲ್ಲ. ಬೇಡ ಎಂದಾಗಲೂ ನಿರ್ದೇಶಕರು ಬಿಡಲಿಲ್ಲ. ವಿಡಿಯೋ ಕಳಿಸುವಂತೆ ಹೇಳಿದರು‌. ಆ ಮನವಿ ತಿರಸ್ಕರಿಸದ ಐಶ್ವರ್ಯ ವಿಡಿಯೋ ಕಳಿಸಿದರು..

Aishwarya pisse
ಐಶ್ವರ್ಯ ಪಿಸ್ಸೆ

By

Published : Jan 12, 2021, 2:04 PM IST

ದೇಹದ ಬಣ್ಣಕ್ಕಿಂತ ಮನಸ್ಸಿನ ಬಣ್ಣವೇ ಮುಖ್ಯ ಎಂಬ ಉತ್ತಮ ಸಂದೇಶವನ್ನು ಜಗತ್ತಿಗೆ ಸಾರುವ ಸುಂದರಿ ಧಾರಾವಾಹಿ ಆರಂಭವಾಗಿದೆ.‌ ವಿಭಿನ್ನ ಹಾಗೂ ಚಾಲೆಂಜಿಂಗ್ ಪಾತ್ರಕ್ಕೆ ಮುಂದಾಗಿರುವ ಐಶ್ವರ್ಯ ಪಿಸ್ಸೆ ತಮ್ಮ ಪಾತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸುಂದರಿ ಧಾರಾವಾಹಿಯಲ್ಲಿ ಐಶ್ವರ್ಯ ಪಿಸ್ಸೆ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ಪಾರ್ವತಿ ಆಗಿ ಅಭಿನಯಿಸುತ್ತಿದ್ದ ಐಶ್ವರ್ಯ ಪಿಸ್ಸೆ ಮುಂದೆ ತೆಲುಗಿನ ಕಸ್ತೂರಿ ಧಾರಾವಾಹಿಯಲ್ಲಿ ನಾಯಕಿ ಕಸ್ತೂರಿಯಾಗಿ ಅಭಿನಯಿಸುತ್ತಿದ್ದಾರೆ.

ಇದೀಗ ಸುಂದರಿಯಾಗಿ ಕನ್ನಡ ಕಿರುತೆರೆಗೆ ಮರಳಿದ್ದು "ಸುಂದರಿ ಬಹಳ ಆಸೆ, ಆಕಾಂಕ್ಷೆಗಳನ್ನು ತುಂಬಿಕೊಂಡಿರುವ ಹುಡುಗಿ. ಆಕೆಯ ಜೀವನದ ಗುರಿ ಐಎಎಸ್ ಆಗಬೇಕು ಎಂಬುದು. ತನ್ನ ಕನಸು ನನಸು ಮಾಡುವ ಉದ್ದೇಶ ಹೊಂದಿರುವ ಸುಂದರಿ ತನ್ನ ಬಾಹ್ಯನೋಟದಿಂದಾಗಿ ಸದಾಕಾಲ ಅವಮಾನಕ್ಕೆ ಉಂಟಾಗುತ್ತಾಳೆ" ಎಂದು ಸುಂದರಿಯ ಬಗ್ಗೆ ಮಾತನಾಡುತ್ತಾರೆ ಐಶ್ವರ್ಯ ಪಿಸ್ಸೆ.

ಐಶ್ವರ್ಯ ಪಿಸ್ಸೆ

ಸುಂದರಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆತಾಗ ಐಶ್ವರ್ಯ ನಟಿಸುವುದಿಲ್ಲ ಎಂದಿದ್ದರು. ಯಾಕೆಂದರೆ, ಸುಂದರಿ ಪಾತ್ರ ನಿಜಕ್ಕೂ ತುಂಬಾ ಭಿನ್ನವಾಗಿತ್ತು. ಆದ ಕಾರಣ ನಾನು ಒಪ್ಪಿಕೊಳ್ಳಲಿಲ್ಲ. ಬೇಡ ಎಂದಾಗಲೂ ನಿರ್ದೇಶಕರು ಬಿಡಲಿಲ್ಲ. ವಿಡಿಯೋ ಕಳಿಸುವಂತೆ ಹೇಳಿದರು‌. ಆ ಮನವಿ ತಿರಸ್ಕರಿಸದ ಐಶ್ವರ್ಯ ವಿಡಿಯೋ ಕಳಿಸಿದರು.

ನಂತರ ಆಯ್ಕೆಯೂ ಆದರು. ಅಂದ ಹಾಗೇ ಇಷ್ಟು ದಿನಗಳ ಕಾಲ ಬಬ್ಲಿ ಪಾತ್ರಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಐಶ್ವರ್ಯ ಇದೇ ಮೊದಲ ಬಾರಿಗೆ ಭಿನ್ನ ಪಾತ್ರದ ಮೂಲಕ ನಿಮ್ಮ ಮುಂದೆ ಬರುತ್ತಿದ್ದಾರೆ. ಮಾತ್ರವಲ್ಲ ಸುಂದರಿ ಪಾತ್ರ ಐಶ್ವರ್ಯ ಅವರ ವೃತ್ತಿ ಜೀವನಕ್ಕೆ ಬ್ರೇಕ್ ನೀಡಲಿದೆಯಾ ಎಂದು ಕಾದು ನೋಡಬೇಕಾಗಿದೆ.

ABOUT THE AUTHOR

...view details