ಕರ್ನಾಟಕ

karnataka

ಹಳೆಯ ದಿನಗಳನ್ನು ನೆನಪಿಸಿಕೊಂಡ ಐಶ್ವರ್ಯ ಬಸ್ಪುರೆ

By

Published : Mar 20, 2021, 12:30 PM IST

ಕಿರುತೆರೆ ನಟಿ ಐಶ್ವರ್ಯ ಬಸ್ಪುರೆ ತಮ್ಮ ಮಾಡೆಲಿಂಗ್ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಸೌಂದರ್ಯ ಸ್ಪರ್ಧೆ ಫೋಟೋಗಳನ್ನು ಐಶ್ವರ್ಯ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Aishwarya baspure
ಐಶ್ವರ್ಯ ಬಸ್ಪುರೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಖಳನಾಯಕಿ ಮಾಯಾ ಆಗಿ ನಟಿಸಿ ಕಿರುತೆರೆಯಲ್ಲಿ ಮನೆ ಮಾತಾದ ಐಶ್ವರ್ಯಾ ಬಸ್ಪುರೆ ಬಣ್ಣದ ನಂಟು ಶುರುವಾಗಿದ್ದು ಮಾಡೆಲಿಂಗ್ ಮೂಲಕ. ಮಿಸ್ ಕರ್ನಾಟಕ 2015 ರ ವಿನ್ನರ್ ಆಗಿರುವ ಐಶ್ವರ್ಯಾ ಬಸ್ಪುರೆ ಈ ಸುಂದರ ಕ್ಷಣಗಳನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ಕೊಡಿ : ನಟ ಧನಂಜಯ್

6 ವರ್ಷಗಳ ಹಿಂದಿನ ಫೋಟೋಗಳನ್ನು ಇನ್ಸ್​​​​​ಟಾಗ್ರಾಮ್​​​​​​ನಲ್ಲಿ ಹಂಚಿಕೊಂಡಿರುವ ಐಶ್ವರ್ಯಾ ಬಸ್ಪುರೆ "ನನ್ನ ಜೀವನದ ಅವಿಸ್ಮರಣೀಯ ನೆನಪಿಗೆ ಆರರ ಹರೆಯ. ಮಿಸ್ ಸೌತ್ ಇಂಡಿಯಾ ಕ್ವೀನ್ - 2015, ಮಿಸ್ ಕಾನ್ಫಿಡೆಂಟ್, ಮಿಸ್ ಕರ್ನಾಟಕ, ಈ ಸೌಂದರ್ಯ ಸ್ಪರ್ಧೆಯಲ್ಲಿ ವಿನ್ನರ್ ಆಗಿ ಆಯ್ಕೆ ಆದ ಸುಮಧುರ ಕ್ಷಣ. ಇಂತಹ ಸುವರ್ಣಾವಕಾಶ ಕಲ್ಪಿಸಿಕೊಟ್ಟ ಪ್ರದೀಪ್ ಸರ್​​​​​​​​​​​​​​​​​​​​​ಗೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲದು" ಎಂದು ಬರೆದುಕೊಂಡಿದ್ದಾರೆ. ಈ ಬ್ಯೂಟಿ ಕಂಟೆಸ್ಟ್ ನಲ್ಲಿ ಐಶ್ವರ್ಯಾ ಬಸ್ಪುರೆ ಮಿಸ್ ಕಾನ್ಫಿಡೆಂಟ್ 2015, ಮಿಸ್ ಕರ್ನಾಟಕ 2015 ಜೊತೆಗೆ ಮಿಸ್ ಸೌತ್ ಇಂಡಿಯಾ 2015 ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಮಾಡೆಲಿಂಗ್ ನಂತರ ಬಣ್ಣದ ಲೋಕದತ್ತ ಮುಖ ಮಾಡಿದ ಐಶ್ವರ್ಯಾ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಸತಿ' ಧಾರಾವಾಹಿ ಮೂಲಕ ನಟನಾ ಪಯಣ ಶುರು ಮಾಡಿದರು. ನಂತರ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿರುವ ಈಕೆ 'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ 'ಸಂಘರ್ಷ' ಧಾರಾವಾಹಿಯಲ್ಲಿ ಪ್ರಿಯಾ ಆಗಿ ಐಶ್ವರ್ಯ ನಟಿಸುತ್ತಿದ್ದಾರೆ.

ABOUT THE AUTHOR

...view details