ಸಾಮಾನ್ಯ ಮಹಿಳೆಯರ ಅಸಾಮಾನ್ಯ ಸಾಧನೆಯನ್ನು ಸಂಭ್ರಮಿಸುವ ಸೂಪರ್ ಶೋ ಸುವರ್ಣ ಸೂಪರ್ ಸ್ಟಾರ್ ಆರಂಭವಾಗುತ್ತಿದ್ದು, ಭರಪೂರ ಮನರಂಜನೆಯನ್ನು ಹೊತ್ತು ತರುತ್ತಿದೆ.
ಭರ್ಜರಿ ಉಡುಗೊರೆ ಸೂಪರ್ ಸ್ಟಾರ್ ಕಾರ್ಯಕ್ರಮದ ಥೀಮ್. ಎಲೆ ಮರೆಯ ಕಾಯಿಯಂತೆ, ತಮ್ಮ ಕುಟುಂಬದ ಸಂತೋಷಕ್ಕಾಗಿ ಪ್ರತಿ ನಿಮಿಷ ನಿಸ್ವಾರ್ಥವಾಗಿ ನೆರೆವಾಗುವ ಲಕ್ಷಾಂತರ ಹೆಣ್ಣುಮಕ್ಕಳೇ ಈ ಕಾರ್ಯಕ್ರಮದ ಹೈಲೈಟ್. ಇಂತ ಸೂಪರ್ ಸ್ಟಾರ್ ಗಳನ್ನ ಕರ್ನಾಟಕದ ಮೂಲೆ ಮೂಲೆಯಿಂದ ಹುಡುಕಿ ತಂದಿದೆ ಸ್ಟಾರ್ ಸುವರ್ಣ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಮಹಿಳೆಯರು ಮುಖದ ತುಂಬ ನಗು, ಕೈ ತುಂಬ ಬಹುಮಾನ ಗೆದ್ದು ಮನೆಗೆ ಹೋಗೋದು ಗ್ಯಾರೆಂಟಿ. ಮನೆಮನೆಯ ಸೂಪರ್ ಸ್ಟಾರ್ ಗಳಿಗೆ ತಮ್ಮ ವಿಭಿನ್ನ ನಿರೂಪಣಾ ಶೈಲಿಯ ಮೂಲಕ ಪ್ರೀತಿಯ ಸನ್ಮಾನ ಮಾಡಲು ಸಿದ್ಧವಾಗಿದ್ದಾರೆ ನಿರೂಪಕಿ ಶಾಲಿನಿ. ಮೊದಲ ಸಂಚಿಕೆಯಲ್ಲಿ ಗೇಮ್ ಶೋ ಅತಿಥಿಗಳಾಗಿ ಸ್ಯಾಂಡಲ್ ವುಡ್ ಸ್ಟಾರ್ಸ್ ಸುಧಾರಾಣಿ, ಅನು ಪ್ರಭಾಕರ್ ಮತ್ತು ಐಂದ್ರಿತಾ ರೇ ಭಾಗವಹಿಸಿದ್ದಾರೆ.
ನಂತರದ ಎಪಿಸೊಡ್ ಗಳಲ್ಲಿ ಅನೇಕ ಸಾಮಾನ್ಯ ಮಹಿಳೆಯರು ಭಾಗವಹಿಸಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ನ.23ರಿಂದ ಸೋಮವಾರದಿಂದ ಶನಿವಾರವರೆಗೆ ಸಂಜೆ 5 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.