ಕರ್ನಾಟಕ

karnataka

ETV Bharat / sitara

ತೆಲುಗು ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿರುವ ಅಗ್ನಿಸಾಕ್ಷಿ ವಿಲನ್ - Priyanka in Telugu serial

ಬಿಗ್​ಬಾಸ್​ನಿಂದ ಬಂದ ನಂತರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದಿದ್ದ ನಟಿ ಪ್ರಿಯಾಂಕಾ ಶಿವಣ್ಣ, ತೆಲುಗು ಧಾರಾವಾಹಿಗಳಲ್ಲಿ ಕೂಡಾ ನಟಿಸುತ್ತಿದ್ದಾರೆ. 'ಕೃಷ್ಣ ತುಳಸಿ' ಎಂಬ ಧಾರಾವಾಹಿಯಲ್ಲಿ ಪ್ರಿಯಾಂಕಾ ನಟಿಸುತ್ತಿದ್ದು ಇದಕ್ಕೂ ಮುನ್ನ ಅವರು 'ಕಥಲೋ ರಾಜಕುಮಾರಿ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.

Priyanka Shivanna
'ಕೃಷ್ಣ ತುಳಸಿ'

By

Published : Mar 4, 2021, 5:59 PM IST

'ಅಗ್ನಿಸಾಕ್ಷಿ' ಧಾರಾವಾಹಿಯ ಚಂದ್ರಿಕಾ ಆಗಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದಿರುವ ಪ್ರಿಯಾಂಕಾ ಶಿವಣ್ಣ, ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ಕೂಡಾ ಭಾಗವಹಿಸುವ ಮೂಲಕ ರಾಜ್ಯಾದ್ಯಂತ ಮನೆ ಮಾತಾಗಿದ್ದರು. ದೊಡ್ಮನೆಯಲ್ಲಿ ಇದ್ದಷ್ಟು ದಿನ ತಮ್ಮ ಮಾತು, ನಡವಳಿಕೆ ಮೂಲಕ ಪ್ರಿಯಾಂಕಾ ವೀಕ್ಷಕರ ಮನ ಸೆಳೆದಿದ್ದರು.

ಕಿರುತೆರೆ ನಟಿ ಪ್ರಿಯಾಂಕಾ ಶಿವಣ್ಣ

ಇದನ್ನೂ ಓದಿ:'ರಂಗನಾಯಕ' ಸಿನಿಮಾ ಮುಂದುವರೆಯುವುದಾ, ಇಲ್ಲವಾ...ಈ ಅನುಮಾನ ಬರಲು ಕಾರಣವೇನು...?

ಪ್ರಿಯಾಂಕ, ಗಾಜಿನ ಮನೆಯಿಂದ ಬಂದದ್ದೇ ತಡ ಸಿನಿಮಾದಲ್ಲಿ ಕೂಡಾ ನಟಿಸುವ ಅವಕಾಶ ಪಡೆದರು. ಪವನ್ ನಿರ್ದೇಶನದ 'ಫ್ಯಾಂಟಸಿ' ಸಿನಿಮಾದಲ್ಲಿ ಖಳನಾಯಕಿಯಾಗಿ ನಟಿಸುವ ಮೂಲಕ ಮೊದಲ ಬಾರಿ ಹಿರಿತೆರೆಗೆ ಕಾಲಿಟ್ಟ ಪ್ರಿಯಾಂಕಾ ಈಗ ಮತ್ತೆ ಕಿರುತೆರೆಗೆ ಮರಳಿದ್ದಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿಯಲ್ಲಿ ನಾಯಕಿ ಸತ್ಯ ಅಕ್ಕ ದಿವ್ಯ ಆಗಿ ಅಭಿನಯಿಸುತ್ತಿರುವ ಪ್ರಿಯಾಂಕ, ಈಗ ಪರಭಾಷೆಗೂ ಹೊರಟಿದ್ದಾರೆ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕೃಷ್ಣ ತುಳಸಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ತೆಲುಗು ಕಿರುತೆರೆಯಲ್ಲಿ ನಟನಾ ಛಾಪನ್ನು ಪಸರಿಸಲು ತಯಾರಾಗಿದ್ದಾರೆ ಪ್ರಿಯಾಂಕಾ.‌ ಈ ನಟಿಗೆ ತೆಲುಗು ಕಿರುತೆರೆ ಹೊಸದೇನಲ್ಲ. ಇದಕ್ಕೂ ಮುನ್ನ 'ಕಥಲೋ ರಾಜಕುಮಾರಿ' ಧಾರಾವಾಹಿಯಲ್ಲಿ ಪ್ರಿಯಾಂಕಾ ನಟಿಸಿದ್ದು ಇದೀಗ ಕೃಷ್ಣ ತುಳಸಿ ಮೂಲಕ ಮತ್ತೆ ತೆಲುಗು ಕಿರುತೆರೆಗೆ ಕಾಲಿಟ್ಟಿದ್ದಾರೆ. ತೆಲುಗು ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಪ್ರಿಯಾಂಕಾ ಅವರನ್ನು ತೆಲುಗು ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಕಾದುನೋಡಬೇಕು.

ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರಿಯಾಂಕಾ

ABOUT THE AUTHOR

...view details