ಕರ್ನಾಟಕ

karnataka

ETV Bharat / sitara

ಮತ್ತದೇ ತಂಡದೊಂದಿಗೆ ಬರಲಿದೆ ಅಗ್ನಿಸಾಕ್ಷಿ ಪಾರ್ಟ್ 2 - actoe rajesh dhruva social media

ಅಗ್ನಿಸಾಕ್ಷಿ ಪಾರ್ಟ್ 2 ಆರಂಭವಾಗುವ ಲಕ್ಷಣ ಕಾಣುತ್ತಿದೆ. ಮತ್ತೆ ನಾವು ಹೊಸ ಎಪಿಸೋಡ್​ನೊಂದಿಗೆ ಬರಲಿದ್ದೇವೆ ಎಂದು ನಟ ರಾಜೇಶ್ ಧ್ರುವ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

agnisakshi
agnisakshi

By

Published : Oct 12, 2020, 7:55 PM IST

Updated : Oct 12, 2020, 8:01 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಅದೆಷ್ಟು ಹೆಂಗಳೆಯರಿಗೆ ಮೋಡಿ ಮಾಡಿತ್ತು. ಬರೋಬ್ಬರಿ ಆರು ವರ್ಷ ಮೂಡಿ ಬಂದ ಈ ಧಾರಾವಾಹಿ ಕೆಲವು ತಿಂಗಳ ಹಿಂದಷ್ಟೇ ಕತೆ ಮುಗಿಸಿತ್ತು.

ಆದರೆ, ಈಗ ಮತ್ತೆ ಅಗ್ನಿಸಾಕ್ಷಿ ಪಾರ್ಟ್ 2 ಆರಂಭವಾಗುವ ಲಕ್ಷಣ ಕಾಣುತ್ತಿದೆ. ಮತ್ತೆ ನಾವು ಹೊಸ ಎಪಿಸೋಡ್​ನೊಂದಿಗೆ ಬರಲಿದ್ದೇವೆ ಎಂದು ನಟ ರಾಜೇಶ್ ಧ್ರುವ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಅಗ್ನಿಸಾಕ್ಷಿ ಪಾರ್ಟ್ 2

ಈ ಫೋಟೋದಲ್ಲಿ ಹೀರೋ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ, ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ, ಮುಖ್ಯಮಂತ್ರಿ ಚಂದ್ರು, ಸುಕೃತಾ ನಾಗ್ ಇದ್ದಾರೆ. ಹೀಗಾಗಿ ಈ ಟೀಂ ಮತ್ತೆ ಹೊಸ ಎಪಿಸೋಡ್​ಗಳೊಂದಿಗೆ ಕಿರುತೆರೆಗೆ ಬರುವುದು ಪಕ್ಕಾ ಆಗಿದೆ. ಈ ವಿಚಾರ ತಿಳಿಯುತ್ತಿದ್ದಂತೇ ಅಭಿಮಾನಿಗಳು ಖುಷಿಯಿಂದಲೇ ಪ್ರತಿಕ್ರಿಯಿಸುತ್ತಿದ್ದಾರೆ.

ಅಗ್ನಿಸಾಕ್ಷಿ ಪಾರ್ಟ್ 2

ಅತ್ತ ವಿಜಯ್ ಸೂರ್ಯ ಪ್ರೇಮಲೋಕ ಧಾರಾವಾಹಿ ಮುಗಿಸಿ ಹೊಸ ಸಿನಿಮಾವೊಂದರಲ್ಲಿ ಅಭಿನಯಿಸಿ ಬಂದಿದ್ದಾರೆ. ಇತ್ತ ವೈಷ್ಣವಿ ಕೂಡಾ ಅಗ್ನಿಸಾಕ್ಷಿ ಬಳಿಕ ಒಂದು ಸಿನಿಮಾ ಬಿಟ್ಟರೆ ಕಿರುತೆರೆಯಲ್ಲಿ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಹೀಗಾಗಿ ಮತ್ತೆ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಜೋಡಿ ಮೋಡಿ ಮಾಡುವುದು ಪಕ್ಕಾ ಆಗಿದೆ.

Last Updated : Oct 12, 2020, 8:01 PM IST

ABOUT THE AUTHOR

...view details