ಕರ್ನಾಟಕ

karnataka

ETV Bharat / sitara

'ಪುನೀತ್,‌ ದರ್ಶನ್,‌ ಯಶ್ ನನಗೆ ಸಹಾಯ ಮಾಡಿ..': ನಟಿ ವಿಜಯಲಕ್ಷ್ಮಿ ಮನವಿ - actress vijayalakshmi request to Puneet and Yash for financial help

ಕನ್ನಡದ ಸ್ಟಾರ್ ನಟರುಗಳಾದ ಪುನೀತ್ ರಾಜ್ ಕುಮಾರ್, ದರ್ಶನ್ ಹಾಗು ಯಶ್ ಸಾರ್ ನನಗೆ ಸಹಾಯ ಮಾಡಿ ಎಂದು ಮತ್ತೊಂದು ವಿಡಿಯೋ ಮೂಲಕ ನಟಿ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.

actress vijayalakshmi
ವಿಜಯಲಕ್ಷ್ಮಿ, ಪುನೀತ್ ರಾಜ್ ಕುಮಾರ್ ಹಾಗು ಯಶ್​​

By

Published : Sep 22, 2021, 10:16 PM IST

ಕನ್ನಡ ಹಾಗು ತಮಿಳು ಚಿತ್ರರಂಗದಲ್ಲಿ ಮಿಂಚಿದ ನಟಿ ವಿಜಯಲಕ್ಷ್ಮಿ. ಸ್ಯಾಂಡಲ್‌ವುಡ್​​ನಲ್ಲಿ ಸೂರ್ಯವಂಶ, ನಾಗಮಂಡಲ, ಸ್ವಸ್ತಿಕ್ ಸಿನಿಮಾ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಇವರು ಪ್ರಖ್ಯಾತಿ ಹೊಂದಿದ್ದರು.

ನಟಿ ವಿಜಯಲಕ್ಷ್ಮಿ ಮನವಿ

ವಿಜಯಲಕ್ಷ್ಮಿ ಕೆಲವು ತಿಂಗಳ ಹಿಂದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭದಲ್ಲಿ, 'ಸಹೋದರಿ ಉಷಾ ಆರೋಗ್ಯ ಚಿಂತಾಜನಕವಾಗಿದೆ, ದಯಮಾಡಿ ನಮಗೆ ಹಣದ ಸಹಾಯ ಮಾಡಿ ಅಂತಾ ವಿಡಿಯೋ ಮೂಲಕ ಮನವಿ ಮಾಡಿದ್ದರು. ಬಳಿಕ ನನಗೆ ಕೊರೊನಾ ಪಾಸಿಟಿವ್ ಆಗಿ, ಆರೋಗ್ಯ ತುಂಬಾ ಗಂಭೀರವಾಗಿದೆ, ಸಹಾಯ ಮಾಡಿ' ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ:ಮತ್ತೊಂದು ಸಂಕಷ್ಟದಲ್ಲಿ ವಿಜಯಲಕ್ಷ್ಮಿ: ಸಹೋದರಿಗಾಗಿ ಶಿವಣ್ಣನ ಸಹಾಯ ಕೇಳಿದ ನಟಿ

ಇದೀಗ ಅವರು, 'ಕನ್ನಡದ ಸ್ಟಾರ್ ನಟರುಗಳಾದ, ಪುನೀತ್ ರಾಜ್ ಕುಮಾರ್, ದರ್ಶನ್ ಹಾಗು ಯಶ್ ಸಾರ್ ನನಗೆ ಸಹಾಯ ಮಾಡಿ' ಎಂದು ಮತ್ತೊಂದು ವಿಡಿಯೋ ಮ‌ೂಲಕ ಮನವಿ ಮಾಡಿದ್ದಾರೆ.

ನಾನು ಜ್ವರದಿಂದ ತುಂಬಾ ನರಳುತ್ತಿದ್ದೇನೆ. ಐದು ದಿನಗಳಿಂದ ಜ್ವರ ಬಂದಿದ್ದು, ಕೋವಿಡ್​ ಸೆಂಟರ್​ನಲ್ಲಿ ಇದ್ದೇನೆ. ಪುನೀತ್, ದರ್ಶನ್ ಹಾಗು ಯಶ್‌ ಅವರಿಗೆ ಈ ವಿಡಿಯೋ ತಲುಪಿಸಿ ಎಂದು ಹೇಳುತ್ತಿದ್ದೇನೆ. ಯಾಕೆಂದರೆ ಈ ಮೂರು ಜನ ನಟರು ಬೇರೆಯವರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದಾರೆ. ಹಾಗಾಗಿ ಈ ವಿಡಿಯೋ ಮೂಲಕ ಸಹಾಯ ಮಾಡಿ ಎಂದು ಕೇಳುತ್ತಿರುವುದಾಗಿ ಅವರು ಹೇಳಿದ್ದಾರೆ.

ಉಷಾ ಅವರಿಗೆ ಬೇರೆ ಕಡೆ ಚಿಕಿತ್ಸೆ ಕೊಡಿಸಲು ನಮ್ಮ ಬಳಿ ಹಣವಿಲ್ಲ. ನಾವೀಗ ಬಹಳ ನೋವಿನಲ್ಲಿ ಇದ್ದೇವೆ. ನಾನು ತಮಿಳುನಾಡು ಸ್ಟಾರ್​​ಗಳಿಗೆ ಕೇಳಿಕೊಂಡಿಲ್ಲ. ಯಾಕೆಂದರೆ ನನಗೆ ಕರ್ನಾಟಕದಲ್ಲಿ ತುಂಬಾ ಪ್ರೀತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:'ನಾನು ಉಳಿಯೋದು ಕಷ್ಟ, ದಯಮಾಡಿ ಧನಸಹಾಯ ಮಾಡಿ': ನಟಿ ವಿಜಯಲಕ್ಷ್ಮಿ ಮನವಿ

ABOUT THE AUTHOR

...view details