ಬೆಂಗಳೂರು: ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ವೀಕ್ಷಕರ ಮನ ಗೆದ್ದಿರುವ ಉಮಾಶ್ರೀ, ಇದೀಗ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರವಾಹಿ ‘ಪುಟ್ಟಕ್ಕನ ಮಕ್ಕಳು’ನಲ್ಲಿ ಪುಟ್ಟಕ್ಕನಾಗಿ ಉಮಾಶ್ರೀ ಕಾಣಿಸಿಕೊಳ್ಳಲಿದ್ದಾರೆ.
ಪುಟ್ಟಕ್ಕನಾಗಿ ಕಿರುತೆರೆಗೆ ಬರಲಿದ್ದಾರೆ ನಟಿ ಉಮಾಶ್ರೀ..! - ಪುಟ್ಟಕ್ಕನ ಮಕ್ಕಳು ಧಾರಾವಾಹಿ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕ ಆಗಿ ಉಮಾಶ್ರೀ ಅಭಿನಯಿಸಲಿದ್ದು, ಮೂರು ಹೆಣ್ಮಕ್ಕಳ ಅಮ್ಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿಂಗಲ್ ಮದರ್ ಆಗಿರುವ ಪುಟ್ಟಕ್ಕ ತನ್ನ ಮೂರು ಜನ ಹೆಣ್ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾಳೆ. ಆಗ ಅವಳಿಗೆ ಏನೆಲ್ಲಾ ತೊಂದರೆಗಳು, ಕಷ್ಟಗಳು ಎದುರಾಗುತ್ತವೆ ಎಂಬುದೇ ಧಾರಾವಾಹಿಯ ಕಥಾ ಹಂದರ.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕ ಆಗಿ ಉಮಾಶ್ರೀ ಅಭಿನಯಿಸಲಿದ್ದು, ಮೂರು ಹೆಣ್ಮಕ್ಕಳ ಅಮ್ಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿಂಗಲ್ ಮದರ್ ಆಗಿರುವ ಪುಟ್ಟಕ್ಕ ತನ್ನ ಮೂರು ಜನ ಹೆಣ್ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾಳೆ. ಆಗ ಅವಳಿಗೆ ಏನೆಲ್ಲಾ ತೊಂದರೆಗಳು, ಕಷ್ಟಗಳು ಎದುರಾಗುತ್ತವೆ ಎಂಬುದೇ ಧಾರಾವಾಹಿಯ ಕಥಾ ಹಂದರ. ಇನ್ನು ಪುಟ್ಟಕ್ಕನ ಮಕ್ಕಳಾಗಿ ಹೊಸ ನಟಿಯರು ನಟಿಸಲಿದ್ದು ಅವರೆಲ್ಲಾ ಯಾರು ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಾಗಿದೆ.
ಪುಟ್ಟಕ್ಕನ ಮಕ್ಕಳು ತೆಲುಗು ಧಾರಾವಾಹಿ ರಾಧಮ್ಮ ಕುತುರುವಿನ ರಿಮೇಕ್ ಆಗಿದ್ದು ಉಳಿದ ಪಾತ್ರಗಳ ಕುರಿತ ಮಾಹಿತಿ ದೊರಕಬೇಕಾಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಪುಟ್ಮಲ್ಲಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಉಮಾಶ್ರೀ, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದ ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದರು.