ಲಾಕ್ಡೌನ್ ಹೇರಿಕೆಯಿಂದ ಮನೆಯಲ್ಲಿಯೇ ಕುಳಿತಿರುವ ನಟಿ ತೇಜಸ್ವಿನಿ ಪ್ರಕಾಶ್, ಇನ್ಸ್ಟಾಗ್ರಾಂನಲ್ಲಿ ತಮ್ಮ ಧಾರಾವಾಹಿ ತಂಡದ ಫೋಟೋ ಹಾಕಿ ಹಳೆಯ ದಿನಮಾನಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲದೇ ಆದಷ್ಟು ಬೇಗ ಶೂಟಿಂಗ್ ಶುರು ಆಗಲಿ... ಎಲ್ಲರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ ಈ ಬೆಡಗಿ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಲಾವಣ್ಯ ಪಾತ್ರ ಮಾಡುತ್ತಿರುವ ತೇಜಸ್ವಿನಿ, ಚಿತ್ರೀಕರಣವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಧಾರಾವಾಹಿಯಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿರುವ ತೇಜಸ್ವಿನಿ, ಕಿರುತೆರೆಗೆ ಹೊಸಬರೇನಲ್ಲ ನಿಜ. ಆದರೆ, ಆಕೆಯ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಮಾತ್ರ ಹಿರಿತೆರೆ!