ಕರ್ನಾಟಕ

karnataka

ETV Bharat / sitara

ನನ್ನ ಮಲಗಲು ಕರೆದೆ, ಹಾಗೇ ಹೀರೋ ಜತೆನೂ ಮಲಗುತ್ತಿಯಾ.. ನಟಿಯ ಡೇರ್‌ಡೆವಿಲ್‌ ಪ್ರಶ್ನೆಗೆ ನಿರ್ಮಾಪಕ ಸ್ಟನ್‌.. - ಚಿತ್ರರಂಗ

ಬಾಲಿವುಡ್​, ಟಾಲಿವುಡ್ ಹಾಗು ಸ್ಯಾಂಡಲ್​​ವುಡ್​ನಲ್ಲಿಯೂ ಮೀಟೂ ಅಭಿಯಾನ ಜೋರಾಗೆ ಸದ್ದು ಮಾಡಿತ್ತು. ಈಗ ಮರಾಠಿ ಚಿತ್ರರಂಗದಲ್ಲಿಯೂ ಅದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ನಟಿ ಶೃತಿ 'ಅವಕಾಶಕ್ಕಾಗಿ ಅಡ್ಜೆಸ್ಟ್​ಮೆಂಟ್​' ಪಾಲಸಿ ಬಗ್ಗೆ ಓಪನ್ ಆಗಿಯೇ ಮಾತನಾಡಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Apr 5, 2019, 8:18 PM IST

Updated : Apr 5, 2019, 8:29 PM IST

ಮುಂಬೈ : 'ಕಾಸ್ಟಿಂಗ್​ ಕೌಚ್'​​ ಚಿತ್ರರಂಗದಲ್ಲಿರುವ ಪುರಾತನ ಅಲಿಖಿತ ಸಂಪ್ರದಾಯ. ಬಣ್ಣ ಹಚ್ಚಲು ಚಿತ್ರರಂಗಕ್ಕೆ ಬರುವ ನಟ-ನಟಿಯರಿಗೆ ಬಟ್ಟೆ ಬಿಚ್ಚುವಂತೆ ಪೀಡಿಸುವ ಕೀಚಕರು ಸಿನಿಮಾ ಇಂಡಸ್ಟ್ರಿಯಲ್ಲಿರುವ ವಿಚಾರ ಸಿಕ್ರೇಟ್​ ಆಗಿ ಉಳಿದಿಲ್ಲ.

ಕಳೆದ ವರ್ಷ ಹಾಲಿವುಡ್​ನಲ್ಲಿ ಉದಯವಾದ 'ಮೀಟೂ' ಅಭಿಯಾನ, ಬೆಳ್ಳಿ ಪರದೆ ಹಿಂದಿರುವ ಕತ್ತಲ ಕೋಣೆ ಬಗ್ಗೆ ಇಡೀ ವಿಶ್ವಕ್ಕೆ ಸಾರಿತು. ಅದು ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಮೇಲಂತೂ ಸಂಚಲನ ಮೂಡಿತು. ಸಾಕಷ್ಟು ನಟಿಯರು ತಾವು ಎದುರಿಸಿದ ಕರಾಳತೆಯನ್ನ ಎಲ್ಲರೆದುರೂ ಹೇಳಿಕೊಂಡಿದ್ದರು. ಕಾಳ್ಗಿಚ್ಚಿನಂತೆ ವೇಗ ಪಡೆದುಕೊಂಡ ಈ ಅಭಿಯಾನ, ದೊಡ್ಡ ದೊಡ್ಡ ನಟರ ಬುಡಕ್ಕೆ ಬೆಂಕಿ ಇಟ್ಟಿತು.

ಈಗ ಮರಾಠಿ ನಟಿ ಶೃತಿ ಮರಾಠೆ ಕಾಮುಕ ನಿರ್ಮಾಪಕನ ಬಣ್ಣ ಬಯಲು ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹಾಸಿಗೆಗೆ ಕರೆದ ನಿರ್ಮಾಪಕನ ಬೆವರಿಳಿಸಿರುವ ಕಥೆ ಹೇಳಿಕೊಂಡಿದ್ದಾರೆ. ಅದು ದೊಡ್ಡ ಪ್ರಾಜೆಕ್ಟ್​. ಆ ಚಿತ್ರದ ನಿರ್ಮಾಪಕ ನನ್ನ ಬಳಿ ಬಂದು ನೇರವಾಗಿಯೇ ಒಂದು ರಾತ್ರಿ ನಿನ್ನ ಜತೆ ಇರಬೇಕು ಎಂದು ಆಫರ್​ ಮಾಡಿದ. ಇದಕ್ಕೆ ಖಡಕ್ ಉತ್ತರ ಕೊಟ್ಟ ನಾನು, 'ಓಕೆ; ನನ್ನನ್ನು ನಟಿ ಮಾಡಲು ನನ್ನ ಜತೆ ಮಲಗಲು ಬಯಸುತ್ತಿದ್ದೀಯಾ. ಇದರಂತೆ ನಾಯಕನ ಜತೆಯೂ ಮಲಗುತ್ತಿಯಾ?' ಎಂದು ಪ್ರಶ್ನಿಸಿದೆ'. ನನ್ನ ಈ ಮೊಣಚು ಮಾತಿನಿಂದ ಆತ ವಿಚಲಿತಗೊಂಡಿದ್ದ' ಎಂದಿದ್ದಾರೆ ಶೃತಿ.

ಈ ಘಟನೆಯನ್ನು ಇಷ್ಟಕ್ಕೆ ಕೈ ಬಿಡದ ಶೃತಿ, ಎಲ್ಲರೆದರೂ ನಿರ್ಮಾಪಕನ ಕೊಳಕು ಬುದ್ಧಿ ಬಿಚ್ಚಿಟ್ಟರಂತೆ. ಬಳಿಕ ಆತನನ್ನು ಆ ಪ್ರಾಜೆಕ್ಟ್​ನಿಂದ ಕೈ ಬಿಡಲಾಯಿತಂತೆ. ಇಷ್ಟೆಲ್ಲ ಹೇಳಿರುವ ಶೃತಿ, ತಮ್ಮನ್ನು ಮಂಚಕ್ಕೆ ಕರೆದ ಭೂಪನ ಹೆಸರು ಮಾತ್ರ ಬಹಿರಂಗ ಪಡಿಸಿಲ್ಲ.

Last Updated : Apr 5, 2019, 8:29 PM IST

ABOUT THE AUTHOR

...view details