ಕರ್ನಾಟಕ

karnataka

ETV Bharat / sitara

ಸಿದ್ದರಾಜ್​​ ಬಗ್ಗೆ ಭಾವನಾತ್ಮಕ ಪೋಸ್ಟ್ ಮಾಡಿದ ನಟಿ ಸಂಗೀತಾ - ನಟಿ ಸಂಗೀತಾ

ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯ ಗಣ್ಯರು ಸಿದ್ದರಾಜ್​ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದು, ಹರಹರ ಮಹಾದೇವ ಧಾರಾವಾಹಿಯ ಸತಿ ಪಾತ್ರಧಾರಿ ಸಂಗೀತಾ ಮಹಾದೇವ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಸಿದ್ದರಾಜ್ ಕಲ್ಯಾಣ್ಕರ್ ಬಗ್ಗೆ ಭಾವನಾತ್ಮಕ ಪೋಸ್ಟ್ ಮಾಡಿದ ನಟಿ ಸಂಗೀತಾ
ಸಿದ್ದರಾಜ್ ಕಲ್ಯಾಣ್ಕರ್ ಬಗ್ಗೆ ಭಾವನಾತ್ಮಕ ಪೋಸ್ಟ್ ಮಾಡಿದ ನಟಿ ಸಂಗೀತಾ

By

Published : Sep 9, 2020, 9:24 AM IST

ಕನ್ನಡ ಸಿನಿರಂಗ ಒಬ್ಬ ಒಳ್ಳೆಯ ಕಲಾವಿದನನ್ನು ಕಳೆದುಕೊಂಡಿದೆ. ಮೊನ್ನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಖ್ಯಾತ ನಟ ಸಿದ್ದರಾಜ್ ಕಲ್ಯಾಣ್ಕರ್ ಅವರು ನಿನ್ನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯ ಗಣ್ಯರು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದು, ಹರಹರ ಮಹಾದೇವ ಧಾರಾವಾಹಿಯ ಸತಿ ಪಾತ್ರಧಾರಿ ಸಂಗೀತಾ ಮಹಾದೇವ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ಸಂಗೀತಾ

ತನ್ನ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹರಹರ ಮಹಾದೇವ ಧಾರಾವಾಹಿಯಲ್ಲಿ ಸಿದ್ಧರಾಜ್ ಅವರೊಂದಿಗೆ ನಟಿಸಿರುವ ಸಂಗೀತಾ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ " ರೆಸ್ಟ್ ಇನ್ ಪೀಸ್ ದಧೀಚಿ. ನನ್ನ ನಟನಾ ಕರಿಯರ್ ನಿಮ್ಮ ಜೊತೆಗೆ ಆರಂಭವಾಯಿತು. ಅದಕ್ಕೆ ನಾನು ಇಂದಿಗೂ ಹೆಮ್ಮೆ ಪಡುತ್ತೇನೆ. ಹರಹರ ಮಹಾದೇವ ಸೆಟ್​​ನಲ್ಲಿ ನಾನು ಕಂಡ ಪ್ರಬಲ ವ್ಯಕ್ತಿಗಳಲ್ಲಿ ಒಬ್ಬರು ನೀವು. ಜ್ಞಾನದಲ್ಲಿ ಪ್ರಬಲರು. ಆ ನೆನಪುಗಳೆಲ್ಲಾ ನಿನ್ನೆಯಂತೆ ತೋರುತ್ತವೆ" ಎಂದು ಬರೆದುಕೊಂಡಿದ್ದಾರೆ.

ನಟಿ ಸಂಗೀತಾ

"ನಾನು ನಿಮ್ಮನ್ನು ಮೊದಲ ಬಾರಿಗೆ ಭೇಟಿಯಾಗಲು ಉತ್ಸುಕಳಾಗಿದ್ದೆ. ನಿಮ್ಮ ಜೊತೆಗೆ ತೆರೆ ಹಂಚಿಕೊಂಡಿರುವುದು ಬದುಕಿನ ಉತ್ತಮ ಕ್ಷಣಗಳಲ್ಲಿ ಒಂದು ಎಂದು ಬರೆದುಕೊಂಡಿದ್ದಾರೆ. ನೀವು ಮತ್ತೊಮ್ಮೆ ಅದ್ಭುತ ನಟನಾಗಿ ಮರುಜನ್ಮ ಪಡೆಯಿರಿ" ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details