'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ರಾಘವನ್ ಕಿರುತೆರೆ ಜೊತೆಗೆ ಸಿನಿಮಾಗಳಲ್ಲಿ ಕೂಡಾ ಬ್ಯುಸಿ ಇದ್ದಾರೆ. ಶೂಟಿಂಗ್ ಬ್ಯುಸಿ ನಡುವೆಯೂ ರಂಜನಿ ಬಿಡುವು ಪಡೆದು ಬಹಳ ದಿನಗಳ ನಂತರ ತನ್ನ ಆನ್ಸ್ಕ್ರೀನ್ ಅಪ್ಪನನ್ನು ಭೇಟಿಯಾಗಿದ್ದಾರೆ. 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ತನ್ನ ತಂದೆ ಪಾತ್ರ ಮಾಡಿದ್ದ ಗೋಪಾಲಕೃಷ್ಣ ಅವರನ್ನು ರಂಜನಿ ರಾಘವನ್ ಭೇಟಿ ಮಾಡಿದ್ದಾರೆ.
ಬಹಳ ದಿನಗಳ ನಂತರ ಆನ್ಸ್ಕ್ರೀನ್ ಅಪ್ಪನನ್ನು ಭೇಟಿಯಾದ ಪುಟ್ಟಗೌರಿ - Puttagowri Maduve father and daughter
2012 ರಿಂದ ಆರಂಭವಾಗಿ 2018 ವರೆಗೂ ಪ್ರಸಾರ ಕಂಡ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ತಂದೆ-ಮಗಳಾಗಿ ನಟಿಸಿದ್ದ ಗೋಪಾಲಕೃಷ್ಣ ಹಾಗೂ ರಂಜನಿ ರಾಘವನ್ ಬಹಳ ದಿನಗಳ ನಂತರ ಮತ್ತೆ ಭೇಟಿಯಾಗಿದ್ದಾರೆ. ಆನ್ಸ್ಕ್ರೀನ್ ಅಪ್ಪ ಗೋಪಾಲಕೃಷ್ಣ ಜೊತೆ ಇರುವ ಫೋಟೋವನ್ನು ರಂಜನಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ವಿವಾದದ ನಡುವೆಯೂ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ 'ಪೊಗರು'....ಇದುವರೆಗೂ ಮಾಡಿದ ಕಲೆಕ್ಷನ್ ಎಷ್ಟು...?
ಬೆಂಗಳೂರಿನ ಕೆಫೆಯೊಂದರಲ್ಲಿ ನಟ ಗೋಪಾಲಕೃಷ್ಣ ಅವರೊಂದಿಗೆ ಇರುವ ಫೋಟೋವನ್ನು ರಂಜನಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಸೂಕ್ತ ವ್ಯಕ್ತಿಗಳೊಂದಿಗೆ ಮಾಡುವ ಚರ್ಚೆಯು ಯಾವಾಗಲೂ ಅಮೂಲ್ಯವಾದುದು" ಎಂದು ರಂಜನಿ ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಸಾಮಾನ್ಯವಾಗಿ ಧಾರಾವಾಹಿ ಚಿತ್ರೀಕರಣವಾಗುವಾಗ ಅದರಲ್ಲಿ ನಟಿಸುವ ಕಲಾವಿದರು ಒಂದೇ ಕುಟುಂಬದಂತೆ ಇರುತ್ತಾರೆ. ಚಿತ್ರೀಕರಣದ ಸಮಯದಲ್ಲಿ ಪ್ರತಿದಿನ ಭೇಟಿ ಆಗುವ ಇವರು, ಧಾರಾವಾಹಿ ಮುಗಿದ ನಂತರ ಭಾರವಾದ ಮನಸ್ಸಿನಿಂದಲೇ ದೂರವಾಗಿರುತ್ತಾರೆ. ಮತ್ತೆ ಇವರೆಲ್ಲಾ ಭೇಟಿ ಮಾಡುವುದು ಅಪರೂಪ. ಆದರೆ ರಂಜನಿ, ಗೋಪಾಲಕೃಷ್ಣ ಅವರನ್ನು ಭೇಟಿ ಮಾಡುವ ಮೂಲಕ ಧಾರಾವಾಹಿ ಮುಗಿದರೂ ಒಬ್ಬರನೊಬ್ಬರು ಮರೆತಿಲ್ಲ ಎಂಬುದನ್ನು ಈ ಪೋಸ್ಟ್ ಮೂಲಕ ತೋರಿಸಿಕೊಟ್ಟಿದ್ದಾರೆ. ರಂಜನಿ ಪೋಸ್ಟ್ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರಿಯರ್ ವಿಚಾರಕ್ಕೆ ಬರುವುದಾದರೆ ರಂಜನಿ ರಾಘವನ್ ಸದ್ಯಕ್ಕೆ 'ಕನ್ನಡತಿ' ಧಾರಾವಾಹಿಯಲ್ಲಿ ಭುವನೇಶ್ವರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.