'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಿಕಾ ಆಗಿ ನಟಿಸಿದ್ದ ರಾಧಿಕಾ ರಾವ್ ಅವರಿಗೆ ಕೊರೊನಾ ಪಾಸಿಟಿವ್ ಬಂದು ಸದ್ಯ ಅವರು ಚೇತರಿಕೆ ಕಂಡುಕೊಂಡಿದ್ದಾರೆ. ಇದರ ಜೊತೆಗೆ ಕೊರೊನಾ ಬಂದು ಯಾರೆಲ್ಲಾ ಗುಣಮುಖರಾಗಿದ್ದೀರೋ ಅವರೆಲ್ಲಾ ದಯವಿಟ್ಟು ಪ್ಲಾಸ್ಮಾ ದಾನ ಮಾಡಿ ಎಂದು ಅವರು ಹೇಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿರುವ ನಟಿ, ಪ್ಲಾಸ್ಮಾ ದಾನ ಮಾಡುವುದು ಎಷ್ಟು ಅನಿವಾರ್ಯ ಎಂದು ವಿವರಿಸಿದರು.
"ಯಾರಿಗೆಲ್ಲಾ ಕೊರೊನಾ ಪಾಸಿಟಿವ್ ಬಂದು ಗುಣವಾಗಿ 28 ದಿನ ಕಳೆದಿದೆಯೋ ಅವರೆಲ್ಲಾ ದಯವಿಟ್ಟು ಪ್ಲಾಸ್ಮಾ ದಾನ ಮಾಡಿ. ನನಗೂ ಕೊರೊನಾ ಪಾಸಿಟಿವ್ ಬಂದಿತ್ತು. ನಾನು ಇದೀಗ ಕೊವಿಡ್ ನಿಂದ ರಿಕವರಿ ಆಗಿ ಕೇವಲ 22 ದಿನ ಆಗಿದೆಯಷ್ಟೇ. 28 ದಿನ ಕಳೆದ ಕೂಡಲೇ ಪ್ಲಾಸ್ಮಾ ದಾನ ಮಾಡುತ್ತೇನೆ. ನಮ್ಮ ಕೈಯಲ್ಲಿ ಏನೆಲ್ಲಾ ಸಹಾಯ ಮಾಡಲು ಸಾಧ್ಯವಾಗುತ್ತದೋ ಅದನ್ನೆಲ್ಲಾ ನಾವು ಮಾಡೋಣ. ಇದರಿಂದ ಜನರ ಪ್ರಾಣ ಉಳಿಯುತ್ತದೆ" ಎಂದು ಹೇಳಿದ್ದಾರೆ.