ಕರ್ನಾಟಕ

karnataka

ETV Bharat / sitara

ಕಿರುತೆರೆಗೆ 'ಗುಪ್ತಗಾಮಿನಿ' ಕಮ್‌ಬ್ಯಾಕ್‌.. ನಟಿ ಪವಿತ್ರಾ ಲೋಕೇಶ್​ ಇನ್ಮೇಲೆ 'ಅರಮನೆ ಗಿಳಿ'.. - undefined

ಈ ಧಾರವಾಹಿಯಲ್ಲಿ ಇವರದು ಇಡೀ ಊರಿನ ಜನತೆ ಗೌರವಿಸುವ ಪಾತ್ರ. ಈ ಮೀನಾಕ್ಷಿಯಮ್ಮನ ಪಾತ್ರಕ್ಕೆ ಪವಿತ್ರಾ ಲೋಕೇಶ್ ಅವರೇ ಹೇಳಿ ಮಾಡಿಸಿದ ನಟಿ ಎನ್ನುತ್ತದೆ ಧಾರವಾಹಿ ತಂಡ.

ಚಿತ್ರಕೃಪೆ : ಫೇಸ್​ಬುಕ್​

By

Published : May 7, 2019, 2:11 PM IST

ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಬಹುಭಾಷಾ ನಟಿ ಪವಿತ್ರಾ ಲೋಕೇಶ್​ ಮತ್ತೆ ಕಿರುತೆರೆಗೆ ವಾಪಾಸ್​ ಆಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಅರಮನೆ ಗಿಳಿ' ಸೀರಿಯಲ್​ಗೆ ಬಣ್ಣ ಹಚ್ಚಿದ್ದಾರೆ.

ಈ ಧಾರಾವಾಹಿಯಲ್ಲಿ ಮೀನಾಕ್ಷಿ ಪಾತ್ರಧಾರಿಯಾಗಿ ಪವಿತ್ರಾ ಅಭಿನಯಿಸಲಿದ್ದಾರೆ. ಈ ಧಾರವಾಹಿಯಲ್ಲಿ ಇವರದು ಇಡೀ ಊರಿನ ಜನತೆ ಗೌರವಿಸುವ ಪಾತ್ರ. ಈ ಮೀನಾಕ್ಷಿಯಮ್ಮನ ಪಾತ್ರಕ್ಕೆ ಪವಿತ್ರಾ ಲೋಕೇಶ್ ಅವರೇ ಹೇಳಿ ಮಾಡಿಸಿದ ನಟಿ ಎನ್ನುತ್ತದೆ ಧಾರವಾಹಿ ತಂಡ. ಈಗಾಗಲೇ ಪ್ರೋಮೋಗಳಲ್ಲಿ ಇವರ ಪಾತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್​ ಸಿಕ್ಕಿದೆ. ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಮೇ.20 ರಿಂದ ಈ ಧಾರವಾಹಿ ಪ್ರಸಾರವಾಗಲಿದೆ.

ಇನ್ನು ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಪವಿತ್ರಾ ಲೋಕೇಶ್, ಕಿರುತೆರೆಯಲ್ಲಿಯೂ ಅಭಿನಯಿಸಿದ್ದಾರೆ. ಜೀವನ್ಮುಖಿ, ಗುಪ್ತಗಾಮಿನಿ, ಗೆಳತಿ, ನೀತಿಚಕ್ರ, ಧರಿತ್ರಿ, ಪುನರ್ಜನ್ಮ, ಈಶ್ವರಿ, ಸ್ವಾಭಿಮಾನ, ಒಲವೇ ನಮ್ಮ ಬದುಕು ಇವರು ನಟಿಸಿದ ಪ್ರಮುಖ ಸೀರಿಯಲ್​ಗಳು.

For All Latest Updates

TAGGED:

ABOUT THE AUTHOR

...view details