ಕಿರುತೆರೆ ನಟಿ ನಯನ ಅವರ ಬಗ್ಗೆ ತಿಳಿಯದವರಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ತಾಪ್ಸಿ ಪಾತ್ರಕ್ಕೆ ಜೀವ ತುಂಬುತ್ತಿದ್ದ ನಯನ, ಬಣ್ಣದ ಲೋಕಕ್ಕೆ ಪರಿಚಿತರಾಗಿದ್ದು ಚಿಕ್ಕಮ್ಮ ಧಾರಾವಾಹಿ ಮೂಲಕ.
ನಟಿ ನಯನ ವೆಂಕಟೇಶ್ ಮುದ್ದು ಕಂದನ ಫೋಟೋಶೂಟ್! - ನಯನ ವೆಂಕಟೇಶ್ ಕಂದನ ಫೋಟೋಶೂಟ್
ತಾವು ಗರ್ಭಿಣಿಯಾಗಿದ್ದಾಗ ವಿಶಿಷ್ಟ ಶೈಲಿಯ ಫೋಟೋಶೂಟ್ ಮಾಡಿಸಿದ್ದ ನಯನ ಇದೀಗ ತಮ್ಮ ಒಂದು ತಿಂಗಳ ಕಂದನ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಕೂಡಾ ಮಾಡಿದ್ದಾರೆ.
ಮುಂದೆ ಗಾಳಿಪಟ, ವಸುದೈವ ಕುಟುಂಬಕಂ, ಪುಟ್ಟ ಗೌರಿ ಮದುವೆ, ಕನಕ, ಕರ್ಪೂರದ ಗೊಂಬೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಯನ ವಾರಸ್ದಾರ ಧಾರಾವಾಹಿಯಲ್ಲಿ ವಿಲನ್ ಆಗಿ ಅಭಿನಯಿಸಿದ್ದಾರೆ. ಖಳನಾಯಕಿ ಆಗಿ ಬಡ್ತಿ ಪಡೆದ ನಯನ ಅವರಿಗೆ ಮುಂದೆ ಅದೇ ಪಟ್ಟ ಕಾಯಂ ಆಯಿತು ಎಂದರೆ ತಪ್ಪಲ್ಲ. ಏಕೆಂದರೆ ಮುಂದೆ ಮನೆದೇವ್ರು, ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಕೂಡಾ ಖಳನಾಯಕಿಯಾಗಿಯೇ ಅವರು ಮಿಂಚಿದರು. ನಟನೆ ಹೊರತಾಗಿ ಈ ಮುದ್ದು ಮುಖದ ಚೆಲುವೆ ಮತ್ತಷ್ಟು ಸುದ್ದಿಯಾದದ್ದು ಫೋಟೋಶೂಟ್ ಮೂಲಕ. ಗರ್ಭಿಣಿಯಾಗಿದ್ದ ನಯನ ವಿಶಿಷ್ಟ ಶೈಲಿಯ ಫೋಟೋಶೂಟ್ ಮಾಡಿಸಿದ್ದರು. ಜೊತೆಗೆ ಅವರ ಸುಖ ಸಂಸಾರಕ್ಕೆ ಮುದ್ದು ರಾಜಕುಮಾರನ ಆಗಮನವೂ ಆಗಿದ್ದು ಕೂಡಾ ಗೊತ್ತಿದೆ. ಈ ಸಂತಸದ ವಿಚಾರವನ್ನು ನಯನ ಪತಿ ವೆಂಕಟೇಶ್ ಅವರೇ ಹಂಚಿಕೊಂಡಿದ್ದರು.
ನಯನ-ವೆಂಕಟೇಶ್ ದಂಪತಿ ಪುತ್ರ, ಮುದ್ದು ರಾಜಕುಮಾರನಿಗೆ ಈಗಾಗಲೇ ಒಂದು ತಿಂಗಳು ತುಂಬಿದೆ. ತಮ್ಮ ಕುಟುಂಬಕ್ಕೆ ಸೇರ್ಪಡೆಯಾದ ಈ ಪುಟ್ಟ ಕಂದನ ಫೋಟೋಶೂಟ್ ಕೂಡಾ ಆಗಲೇ ಮಾಡಿಸಿದ್ದಾರೆ ನಯನ. ಅಷ್ಟೇ ಅಲ್ಲ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ನಯನ ಅಪ್ಲೋಡ್ ಮಾಡಿದ್ದು, ಕಿರುತೆರೆಪ್ರಿಯರು ನೋಡಿ ಕಣ್ತುಂಬಿಸಿಕೊಳ್ಳಬಹುದು. ಕಂದನ ಫೋಟೋಗಳು ಬಹಳ ಮುದ್ದಾಗಿವೆ.
TAGGED:
ನಯನ ವೆಂಕಟೇಶ್ ಕಂದನ ಫೋಟೋಶೂಟ್