ಕರ್ನಾಟಕ

karnataka

ETV Bharat / sitara

ಮುದ್ದಾದ ಮಗುವಿಗೆ ಜನ್ಮ ನೀಡಿದ ಬಿಗ್​ಬಾಸ್​ ಸ್ಪರ್ಧಿ ನಯನಾ‌ ಪುಟ್ಟಸ್ವಾಮಿ - ನಯನಾ‌ ಪುಟ್ಟಸ್ವಾಮಿ

ಬಿಗ್ ಬಾಸ್ 6ರ ಸ್ಪರ್ಧಿ ಹಾಗೂ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 1ರ ವಿನ್ನರ್ ನಯನಾ‌ ಪುಟ್ಟಸ್ವಾಮಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

nayana-puttaswamy
ನಯನಾ‌ ಪುಟ್ಟಸ್ವಾಮಿ

By

Published : Jun 29, 2021, 3:44 PM IST

ಕಿರುತೆರೆ ನಟಿ ನಯನಾ‌ ಪುಟ್ಟಸ್ವಾಮಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಇಟ್ ಇಸ್ ಎ ಬಾಯ್' ಎಂದು ಬರೆದುಕೊಂಡು ಮಗುವಿನ ಕೈ ಫೋಟೋ ಪೋಸ್ಟ್ ಮಾಡಿದ್ದಾರೆ.

ನಯನಾ ಅವರ ಪತಿ ಚರಣ್ ಅಮೆರಿಕದ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಅವರು ಅಲ್ಲಿಯೇ ನೆಲೆಸಿದ್ದಾರೆ. ನಯನಾ ಕೂಡ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡುತ್ತಿದ್ದಾರಂತೆ. ಅಲ್ಲದೆ ಭಾರತಕ್ಕೆ ಮರಳಿ ಕನ್ನಡ ಚಿತ್ರರಂಗದಲ್ಲಿ ಸೇವೆ ಮಾಡಬೇಕೆಂದು ಆಶಯ ಹೊಂದಿದ್ದಾರೆ.

ಇದನ್ನು ಓದಿ: 'ಅನಿರೀಕ್ಷಿತ' ನಿರ್ದೇಶನ: 'ಈಟಿವಿ ಭಾರತ'ದೊಂದಿಗೆ ಅನುಭವ ಹಂಚಿಕೊಂಡ ಮಿಮಿಕ್ರಿ ದಯಾನಂದ್

ನಯನಾ ಪುಟ್ಟಸ್ವಾಮಿ ಬಿಗ್ ಬಾಸ್ 6 ಸ್ಪರ್ಧಿ ಹಾಗೂ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 1ರ ವಿನ್ನರ್ ಆಗಿದ್ದರು. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ABOUT THE AUTHOR

...view details