'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರ ಮಾಡುತ್ತಿದ್ದ ನಟಿ ಮೇಘಾ ಶೆಟ್ಟಿ ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ಸ್ವತಃ ನಟಿ ಮೇಘಾ ಶೆಟ್ಟಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಒಂದು ಕುಟುಂಬ ಅಂದ ಮೇಲೆ ಗೊಂದಲಗಳು ಇರುತ್ತವೆ. ಆ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದೇವೆ. 'ಜೊತೆ ಜೊತೆಯಲಿ' ಧಾರಾವಾಹಿ ನನಗೆ ಎಲ್ಲವನ್ನೂ ನೀಡಿದೆ. ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ನಿರ್ವಹಿಸುತ್ತೇನೆ. 'ಜೊತೆ ಜೊತೆಯಲಿ ಜೊತೆಯಾಗಿರುತ್ತೇನೆ' ಎಂದು ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಮೇಘಾ ಶೆಟ್ಟಿ ಖುಷಿಯ ವಿಚಾರವನ್ನು ತಿಳಿಸಿದ್ದಾರೆ.