ಕರ್ನಾಟಕ

karnataka

ETV Bharat / sitara

'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರಬಂದ ನಟಿ ಮೇಘಾ ಶೆಟ್ಟಿ.. ಕಾರಣ? - ಧಾರಾವಾಹಿಯಿಂದ ಹೊರಬಂದ ನಟಿ ಮೇಘಾ ಶೆಟ್ಟಿ

ಈ ತಿಂಗಳ ಅಂತ್ಯದವರೆಗೆ ಮೇಘಾ ಶೆಟ್ಟಿ ನಟಿಸಿರುವ ಎಪಿಸೋಡ್​​ಗಳು ಪ್ರಸಾರವಾಗಲಿವೆ. ಧಾರಾವಾಹಿಯಿಂದ ಹೊರ ಬಂದಿರುವುದಕ್ಕೆ ನಟಿ ಮೇಘಾ ಶೆಟ್ಟಿ ಯಾವುದೇ ಸ್ಪಷ್ಟನೆ ನೀಡಿಲ್ಲ.

Actress megha shetty
ನಟಿ ಮೇಘಾ ಶೆಟ್ಟಿ

By

Published : Jul 10, 2021, 5:53 PM IST

Updated : Jul 14, 2021, 2:33 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯ ನಾಯಕಿ ಮೇಘಾ ಶೆಟ್ಟಿ ಇದೀಗ ಹೊರ ಬಂದಿದ್ದಾರೆಂಬ ಸುದ್ದಿ ಕೇಳಿ ಬಂದಿದೆ.

ಫೇಸ್​​ಬುಕ್ ಮೂಲಕ ಆಯ್ಕೆಯಾಗಿ ಕಿರುತೆರೆಗೆ ಪರಿಚಯವಾಗಿದ್ದ ನಟಿ ಮೇಘಾ ಶೆಟ್ಟಿ, ಈ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರ ನಿರ್ವಹಿಸುತ್ತಿದ್ದರು. 20 ವರ್ಷದ ಯುವತಿ 45 ವರ್ಷದ ವ್ಯಕ್ತಿಯನ್ನು ಪ್ರೀತಿಸುವ ಕಥೆ ಇದಾಗಿತ್ತು. ನಟ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್​ ನಾಯಕನಾಗಿ ನಟಿಸಿರುವ ಈ ಧಾರಾವಾಹಿ, ಟಿಆರ್​​ಪಿಯಲ್ಲಿ ಮೊದಲ ಮೂರು ಸ್ಥಾನದಲ್ಲಿದೆ.

ನಟಿ ಮೇಘಾ ಶೆಟ್ಟಿ

ಮೂಲ ಮರಾಠಿಯಿಂದ ರಿಮೇಕ್ ಆಗಿದ್ದ ಜೊತೆ ಜೊತೆಯಲಿ ಧಾರಾವಾಹಿ ನಂತರದ ದಿನಗಳಲ್ಲಿ ಇಲ್ಲಿನ ನೆಟಿವಿಟಿಗೆ ತಕ್ಕಂತೆ ಕಥೆ ಬದಲಾಗಿಸಲಾಗಿತ್ತು. ಇದ್ದಕ್ಕಿದ್ದಂತೆ ನಟಿ ಮೇಘಾ ಶೆಟ್ಟಿ ಧಾರಾವಾಹಿಯಿಂದ ಹೊರ ಬಂದಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಜೊತೆ ಜೊತೆಯ ನಟಿ ಮೇಘಾ ಶೆಟ್ಟಿ

ಈ ತಿಂಗಳ ಅಂತ್ಯದವರೆಗೆ ಮೇಘಾ ಶೆಟ್ಟಿ ನಟಿಸಿರುವ ಎಪಿಸೋಡ್​​ಗಳು ಪ್ರಸಾರವಾಗಲಿವೆ. ಧಾರಾವಾಹಿಯಿಂದ ಹೊರ ಬಂದಿರುವುದಕ್ಕೆ ನಟಿ ಮೇಘಾ ಶೆಟ್ಟಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಲ್ಲದೇ, ಮೇಘಾ ಶೆಟ್ಟಿ ಸ್ಥಾನಕ್ಕೆ ನಾಯಕಿಯಾಗಿ ಯಾರು ಬರಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ.

ನಟಿ ಮೇಘಾ ಶೆಟ್ಟಿ

ಇದನ್ನೂ ಓದಿ: ಮೂಕ ಪ್ರಾಣಿಗಳ ಹಸಿವು ನೀಗಿಸುತ್ತಿದ್ದಾರೆ ನಟಿ ಮೇಘಾ ಶೆಟ್ಟಿ

Last Updated : Jul 14, 2021, 2:33 PM IST

ABOUT THE AUTHOR

...view details