ಕರ್ನಾಟಕ

karnataka

ETV Bharat / sitara

ದಶಕದ ನಂತರ ಕಿರುತೆರೆಗೆ 'ಅಮೆರಿಕಾ ಅಮೆರಿಕಾ' ಖ್ಯಾತಿಯ ಭೂಮಿ - ನಟಿ ಹೇಮಾ ಪ್ರಭಾತ್

'ರಕ್ಷಾಬಂಧನ' ಧಾರಾವಾಹಿಯಲ್ಲಿ ಜನಪ್ರಿಯ ಉದ್ಯಮಿಯೊಬ್ಬರ ಪತ್ನಿ ಈಶ್ವರಿ ಮಹಾದೇವನ್ ಪಾತ್ರದಲ್ಲಿ ಹೇಮಾ ಕಾಣಿಸಿಕೊಂಡಿದ್ದಾರೆ. ಹೇಮಾ ಪ್ರಭಾತ್ ಅವರಿಗೆ ಈ ಪಾತ್ರ ಹೇಳಿಮಾಡಿಸಿದಂತಿದೆ.

actress hema prabhat

By

Published : Aug 20, 2019, 8:41 PM IST

'ಅಮೇರಿಕಾ ಅಮೇರಿಕಾ' ಚಿತ್ರದಲ್ಲಿ ಭೂಮಿ ಪಾತ್ರದ ಮೂಲಕ ಕನ್ನಡ ಸಿನಿರಸಿಕರ ಹೃದಯದಲ್ಲಿ ನೆಲೆಸಿದ್ದ ನಟಿ ಹೇಮಾ ಪ್ರಭಾತ್ ಇದೀಗ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ.

ಅಮೆರಿಕ ಅಮೆರಿಕಾ, ದೊರೆ, ಸಂಭ್ರಮ ಹಾಗೂ ಕೊನೆಯದಾಗಿ ರವಿಮಾಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಹೇಮಾ, ಅಭಿನಯದಿಂದ ದೂರ ಉಳಿದಿದ್ದರು. ದಾಂಪತ್ಯ ಜೀವನದಲ್ಲಿ ಬ್ಯುಸಿಯಾಗಿದ್ದ ಅವರು ಬಣ್ಣ ಹಚ್ಚೋಕೆ ಸಿದ್ಧರಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಕ್ಷಾಬಂಧನ ಧಾರಾವಾಹಿ ಮೂಲಕ ಹೊಸ ತೆರೆ ಮೇಲೆ ಬರುತ್ತಿದ್ದಾರೆ.

ರಕ್ಷಾಬಂಧನ ಧಾರಾವಾಹಿಯಲ್ಲಿ ಜನಪ್ರಿಯ ಉದ್ಯಮಿಯೊಬ್ಬರ ಪತ್ನಿ ಈಶ್ವರಿ ಮಹಾದೇವನ್ ಪಾತ್ರದಲ್ಲಿ ಹೇಮಾ ಕಾಣಿಸಿಕೊಂಡಿದ್ದಾರೆ. ಹೇಮಾ ಪ್ರಭಾತ್ ಅವರಿಗೆ ಈ ಪಾತ್ರ ಹೇಳಿಮಾಡಿಸಿದಂತಿದೆ.

ಈ ಬಗ್ಗೆ ಮಾತಾಡಿರುವ ಹೇಮಾ, ಈ ಧಾರವಾಹಿಯಲ್ಲಿ ನನ್ನ ವಯಸ್ಸಿಗೆ ತಕ್ಕ ಪಾತ್ರ ಸಿಕ್ಕಿದೆ. ತನ್ನ ಮಗಳಿಗಾಗಿ ಏನನ್ನು ಬೇಕಾದರೂ ತ್ಯಾಗಮಾಡುವ ತಾಯಿ ಪಾತ್ರ ನಿರ್ವಹಿಸುತ್ತಿರುವುದಾಗಿ ಖುಷಿ ವ್ಯಕ್ತಪಡಿಸಿದ್ರು.

ಅಮೆರಿಕ ಅಮೆರಿಕಾ, ದೊರೆ, ಸಂಭ್ರಮ ಹಾಗೂ ರವಿಮಾಮ ಸಿನಿಮಾದಲ್ಲಿ ಹೇಮಾ ಪಂಚಮುಖಿಯಾಗಿದ್ದ ಇವರು, ಎರಡನೇ ಮದುವೆ ನಂತರ ಹೇಮಾ ಪ್ರಭಾತ್ ಎಂದು ಹೆಸರು ಬದಲಾಯಿಸಿಕೊಂಡರು.

ABOUT THE AUTHOR

...view details