ಕರ್ನಾಟಕ

karnataka

ETV Bharat / sitara

ಸ್ನೇಹಿತೆಯರೊಂದಿಗೆ ಬ್ಯಾಚುಲರ್ಸ್ ಪಾರ್ಟಿ ಆಚರಿಸಿದ ಕುಲವಧು ಧನ್ಯಾ - ನಟಿ ದೀಪಿಕಾ ಬ್ಯಾಚುಲರ್ ಪಾರ್ಟಿ

ಕೆಲವೇ ದಿನಗಳಲ್ಲಿ ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಇದಕ್ಕೂ ಮುನ್ನ ತನ್ನ ಸ್ನೇಹಿತೆಯರೊಂದಿಗೆ ಬ್ಯಾಚುಲರ್ಸ್ ಪಾರ್ಟಿ ಆಚರಿಸಿದ್ದಾರೆ. ದೀಪಿಕಾ ಕುಲವಧು ಧಾರಾವಾಹಿಯಲ್ಲಿ ಧನ್ಯಾ ಆಗಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

ಧನ್ಯಾ ಬ್ಯಾಚುಲರ್ ಪಾರ್ಟಿ

By

Published : Nov 5, 2019, 5:25 PM IST

'ಕುಲವಧು' ಧಾರಾವಾಹಿಯ ಧನ್ಯಾ ನಿಮಗೆಲ್ಲಾ ಗೊತ್ತು. ಧನ್ಯಾ ಎಂದೇ ಹೆಸರಾದ ದೀಪಿಕಾ, ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತಮ್ಮ ಅಭಿನಯದ ಮೂಲಕ ಎಲ್ಲರನ್ನು ಮನಸ್ಸನ್ನು ಗೆದ್ದಿರುವ ಈ ಚೆಲುವೆಯ ಮನಸ್ಸು ಕದ್ದಿದ್ದು ಆಕರ್ಷ್ ಎಂಬ ನಟ.

ಗೆಳೆಯ ಆಕರ್ಷ್ ಜೊತೆಗೆ ದೀಪಿಕಾ

ತಮ್ಮ ಬಹುಕಾಲದ ಗೆಳೆಯನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ದೀಪಿಕಾ, ನಂತರ ಹಿರಿಯರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಕೂಡಾ ಮಾಡಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಮದುವೆ ಸಹ ಇದೆ. ಅದಕ್ಕೂ ಮುನ್ನ ಸ್ನೇಹಿತೆಯರೊಂದಿಗೆ ಸೇರಿ ದೀಪಿಕಾ ಬ್ಯಾಚುಲರ್ಸ್ ಪಾರ್ಟಿ ಆಚರಿಸಿದ್ದಾರೆ. ಪಾರ್ಟಿ ಮಾಡಿ ಇಡೀ ದಿನ ತಮ್ಮ ಸ್ನೇಹಿತೆಯರೊಂದಿಗೆ ಸಂತೋಷದಿಂದ ಕಾಲ ಕಳೆದಿದ್ದಾರೆ. ಈ ಪಾರ್ಟಿಯಲ್ಲಿ ಪಿಂಕ್ ಬಣ್ಣದ ಬಟ್ಟೆ ಧರಿಸಿದ್ದ ದೀಪಿಕಾ ಬಹಳ ಮುದ್ದಾಗಿ ಕಾಣುತ್ತಿದ್ದಾರೆ. ಸ್ನೇಹಿತೆಯರು ದೀಪಿಕಾ ಅವರಿಗಾಗಿ ಕೇಕ್ ಮತ್ತು ಉಡುಗೊರೆಯನ್ನು ಕೂಡಾ ತಂದಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ದೀಪಿಕಾ ಹಿರಿ ಸೊಸೆ ಧನ್ಯಾ ಆಗಿ ನಟಿಸಿದ್ದರು.

ABOUT THE AUTHOR

...view details