ಕರ್ನಾಟಕ

karnataka

ETV Bharat / sitara

ಉರ್ಮಿಳಾ ಆಗಿ ಕಂಬ್ಯಾಕ್ ಆಗಿರುವುದು ಖುಷಿಯಾಗಿದೆ ಎಂದ ನಟಿ ದೀಪಾ ಭಾಸ್ಕರ್ - ಮಜಾ ಟಾಕೀಸ್​​ನ ಊರ್ಮಿಳಾ ಪಾತ್ರದಲ್ಲಿ ನಟಿ ದೀಪಾ ಭಾಸ್ಕರ್

"ನಾನು ಥಿಯೇಟರ್ ಹಿನ್ನೆಲೆಯಿಂದ ಬಂದವಳು. ಹೀಗಾಗಿ ಕಾಮಿಡಿ ನನಗೆ ಹೊಸದಲ್ಲ. ಸುಬ್ಬಲಕ್ಷ್ಮಿ ಸಂಸಾರದಲ್ಲಿ ನನ್ನ ಪಾತ್ರ ಸ್ವಲ್ಪ ಹಾಸ್ಯದಿಂದ ಕೂಡಿತ್ತು. ಹೀಗಾಗಿ ಮಜಾ ಟಾಕೀಸ್​​ನ ಊರ್ಮಿಳಾ ಪಾತ್ರ ನನಗೆ ಕಷ್ಟವಾಗಲಾರದು" ಎಂದು ನಟಿ ದೀಪಾ ಭಾಸ್ಕರ್ ಹೇಳಿದ್ದಾರೆ.

actress deepa bhaskar
actress deepa bhaskar

By

Published : Apr 15, 2021, 3:09 PM IST

ನಟಿ ದೀಪಾ ಭಾಸ್ಕರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ಸುಬ್ಬಿ ಆಲಿಯಾಸ್ ಸುಬ್ಬಲಕ್ಷ್ಮಿಯಾಗಿ ನಟಿಸಿ ಮನೆಮಾತಾದ ದೀಪಾ ಭಾಸ್ಕರ್ ಈಗ ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್​ನಲ್ಲಿ ಊರ್ಮಿಳಾ ಆಗಿ ಕಿರುತೆರೆಗೆ ಕಂಬ್ಯಾಕ್ ಆಗಿರುವುದು ಎಲ್ಲರಿಗೂ ತಿಳಿದೇ ಇದೆ.

ನಟಿ ದೀಪಾ ಭಾಸ್ಕರ್
ನಟಿ ದೀಪಾ ಭಾಸ್ಕರ್

ಇದರ ಬಗ್ಗೆ ಮಾತನಾಡಿರುವ ದೀಪಾ, "ನಾನು ಥಿಯೇಟರ್ ಹಿನ್ನೆಲೆಯಿಂದ ಬಂದವಳು. ಹೀಗಾಗಿ ಕಾಮಿಡಿ ನನಗೆ ಹೊಸದಲ್ಲ. ಸುಬ್ಬಲಕ್ಷ್ಮಿ ಸಂಸಾರದಲ್ಲಿ ನನ್ನ ಪಾತ್ರ ಸ್ವಲ್ಪ ಹಾಸ್ಯದಿಂದ ಕೂಡಿತ್ತು. ಹೀಗಾಗಿ ಮಜಾ ಟಾಕೀಸ್​​ನ ಊರ್ಮಿಳಾ ಪಾತ್ರ ನನಗೆ ಕಷ್ಟವಾಗಲಾರದು. ಮಜಾ ಟಾಕೀಸ್ ಆರಂಭವಾಗುವುದಕ್ಕಿಂತ ಮೊದಲೇ ಸೃಜನ್ ನನಗೆ ಪರಿಚಯ. ಟೀಮ್ ನನ್ನನ್ನು ಸಂಪರ್ಕಿಸಿದಾಗ ನಾನು ಪ್ರಯತ್ನ ಮಾಡೋಣವೆಂದುಕೊಂಡೆ. ಮಜಾ ಟಾಕೀಸ್​ನ ಶೂಟಿಂಗ್ ವಾರದಲ್ಲಿ ಎರಡು ದಿನಗಳು ನಡೆಯುತ್ತವೆ" ಎಂದಿದ್ದಾರೆ.

ನಟಿ ದೀಪಾ ಭಾಸ್ಕರ್
ನಟಿ ದೀಪಾ ಭಾಸ್ಕರ್

ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ದೀಪಾ ಭಾಸ್ಕರ್ ಊರ್ಮಿಳಾ ಆಗಿ ಮರಳಿ ಬಂದಿರುವುದು ಕಿರುತೆರೆ ವೀಕ್ಷಕರಿಗೆ ಸಂತಸ ತಂದಿದೆ.

ABOUT THE AUTHOR

...view details