ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಆಗಿ ನಟಿಸುತ್ತಿರುವ ಕಿರುತೆರೆ ನಟಿ ಅಶ್ವಿನಿ ಕನ್ನಡದ ಜೊತೆಗೆ ತೆಲುಗಿನ ನಾಗಭೈರವಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಗೂ ಕಾಲಿಟ್ಟಿದ್ದರು.
ನಾಗಭೈರವಿ ಧಾರಾವಾಹಿಯಲ್ಲಿ ಬುಡಕಟ್ಟು ಜನಾಂಗದ ಹುಡುಗಿ ಹಾಗೂ ನಾಗಿಣಿಯಾಗಿ ಕಾಣಿಸಿದ್ದ ಅಶ್ವಿನಿ, ಒಂದೇ ಧಾರಾವಾಹಿಯಲ್ಲಿ ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
ತೆಲುಗಿನ ನಾಗಭೈರವಿ ಧಾರಾವಾಹಿಯಲ್ಲಿದ್ದ ನಟಿ ಅಶ್ವಿನಿ ಇದೀಗ ಕೊರೊನಾ ವೈರಸ್ ಹಾವಳಿ ಜಾಸ್ತಿಯಾಗುತ್ತಿರುವುದರ ಕಾರಣ ಅಶ್ವಿನಿ ಅವರು ನಾಗಭೈರವಿ ಧಾರಾವಾಹಿಯಿಂದ ಹೊರ ಬರುವ ನಿರ್ಧಾರ ಮಾಡಿದ್ದಾರೆ. ‘ಹೊರಗಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ದಿನದಿಂದ ದಿನಕ್ಕೆ ಕೊರೊನಾ ವೈರಸ್ ಜಾಸ್ತಿಯಾಗುತ್ತಿದೆ.
ಈ ಸಂಕಷ್ಟದ ಸಮಯದಲ್ಲಿ ನಾವು ಅದೆಷ್ಟು ಜಾಗ್ರತೆವಹಿಸಿದರೂ ಸಾಲದು. ಇನ್ನು, ಶೂಟಿಂಗ್ಗಾಗಿ ಹೈದರಾಬಾದ್ಗೆ ಹೋಗಿ ಬರಬೇಕು. ಇಂತಹ ಸಮಯದಲ್ಲಿ ಪ್ರಯಾಣ ಮಾಡುವುದು ರಿಸ್ಕ್ ಎಂದೆನಿಸಿತು. ಅದೇ ಕಾರಣದಿಂದ ಧಾರಾವಾಹಿಯಿಂದ ಹೊರಬರುವ ನಿರ್ಧಾರ ಮಾಡಿದೆ’ ಎಂದು ಹೇಳುತ್ತಾರೆ ಅಶ್ವಿನಿ.
ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಆಗಿ ನಟಿಸುತ್ತಿರುವ ಕಿರುತೆರೆ ನಟಿ ‘ಅನಾವಶ್ಯಕವಾಗಿ ಮನೆಯಿಂದ ಹೊರಗೆ ಹೋಗಬೇಡಿ. ಆದಷ್ಟು ಮನೆಯಲಿಯೇ ಸುರಕ್ಷಿತವಾಗಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ನಾವು ಜನರಿಗೆ ಮುನ್ನೆಚ್ಚರಿಕೆಯನ್ನು ನೀಡುತ್ತಿರುತ್ತೇವೆ. ಆದರೆ, ನಾವು ಶೂಟಿಂಗ್‌ಗೆ ಎಂದು ಹೊರಗೆ ಹೋಗುತ್ತೇವೆ.
ಅದ್ಯಾಕೋ ನನಗೆ ತಪ್ಪು ಎಂದೆನಿಸಿತು. ಅದೇ ಕಾರಣದಿಂದ ನಾಗಭೈರವಿ ಧಾರಾವಾಹಿಯಿಂದ ಹೊರ ಬರುವ ಆಲೋಚನೆ ಮಾಡಿದೆ’ ಎಂದು ಹೇಳಿದರು.
ನಾಗಭೈರವಿ ಧಾರಾವಾಹಿಯಿಂದ ಹೊರಬಂದ ಅಶ್ವಿನಿ