ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಅವರ ಸೀಮಂತ ಶಾಸ್ತ್ರ ನಡೆದಿದೆ. ಕೆಂಪು-ಹಸಿರು ಸೀರೆ ತೊಟ್ಟು ಅಮೃತ ಕಂಗೊಳಿಸಿದ್ದಾರೆ.
ಈ ಹಿಂದೆ, ತಾವು ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ಅಮೃತಾ ಹಂಚಿಕೊಂಡಿದ್ದರು. ಹಾಗೇ ತಾವು ಎಲ್ಲರ ಸಮ್ಮುಖದಲ್ಲಿ ಸೀಮಂತ ಮಾಡಿಸಿಕೊಳ್ಳಬೇಕು ಎಂದು ಆಶಿಸಿದ್ದರಂತೆ. ಅದರಂತೆ ತಮ್ಮ ಸೀಮಂತ ಶಾಸ್ತ್ರವನ್ನು ತಂದೆ-ತಾಯಿ, ಅತ್ತೆ-ಮಾವ, ಅಕ್ಕ-ಭಾವ, ಅಣ್ಣ-ಅತ್ತಿಗೆ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರವನ್ನು ನೆರವೇರಿಸಿಕೊಂಡಿದ್ದಾರೆ.
ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಸೀಮಂತದ ಫೋಟೋ ಹಿರಿಯರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದು ನನ್ನ ಕನಸು ಈಡೇರಿದಂತೆ. ಇದಕ್ಕಾಗಿ ನಾನು ಎಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದು ಅಮೃತ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಉದಯ ವಾಹಿನಿಯ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅಮೃತಾ ತಾವು ತಾಯಿಯಾಗುತ್ತಿದ್ದ ಕಾರಣಕ್ಕೆ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು. ಆದಾದ ಬಳಿಕ ಅದೇ ಧಾರಾವಾಹಿಯ ಸಣ್ಣ ಸನ್ನಿವೇಶವೊಂದಕ್ಕೆ ಮತ್ತೆ ಬಣ್ಣ ಹಚ್ಚಿದ್ದರು.