ಇತ್ತೀಚಿಗಷ್ಟೆ 500ರ ಸಂಭ್ರಮ ಆಚರಿಸಿಕೊಂಡ ಕಸ್ತೂರಿ ನಿವಾಸ ಧಾರಾವಾಹಿ ತಂಡ ಇದೀಗ ಹೊಸತನದಲ್ಲಿ ಸಪ್ತಪದಿ ಹೆಜ್ಜೆಗೆ ಸಜ್ಜಾಗುತ್ತಿದೆ. ರಾಘವ್ ಬದುಕಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದ್ದು, ಖುಷಿ ಜೊತೆಗೆ ರಾಘವ್ ಮದುವೆ ಸಂಭ್ರಮ ಮನೆ ಮಾಡಿದೆ.
ಕಸ್ತೂರಿ ನಿವಾಸದಲ್ಲಿ ಸಪ್ತಪದಿ ಸಂಭ್ರಮ: ಮತ್ತೆ ಬಂದ ಅಮೃತಾ - ಕಸ್ತೂರಿ ನಿವಾಸ ಧಾರವಾಹಿಯಲ್ಲಿ ಸಪ್ತಪದಿ ಸಂಭ್ರಮ
ಕಸ್ತೂರಿ ನಿವಾಸ ಧಾರಾವಾಹಿ ತಂಡ ಸಪ್ತಪದಿ ಹೆಜ್ಜೆಗೆ ಸಜ್ಜಾಗುತ್ತಿದೆ. ರಾಘವ್ ಬದುಕಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದ್ದು, ಖುಷಿ ಜೊತೆಗೆ ರಾಘವ್ ಮದುವೆ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಯಾರಿವಳು ಧಾರಾವಾಹಿಯ ಮಾಯಾ ಮತ್ತು ನಿಖಿಲ್ ಹಾಗೂ ಕಾವ್ಯಾಂಜಲಿಯ ಎರಡು ಸೂಪರ್ ಹಿಟ್ ಜೋಡಿಗಳು ಜೊತೆಯಾಗ್ತಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರ ಬಂದಿದ್ದ ಅಮೃತಾ ಒಂದು ಸನ್ನಿವೇಶದ ಪಾತ್ರಕ್ಕಾಗಿ ಮತ್ತೆ ನಟಿಸುತ್ತಿದ್ದಾರೆ. ಆದರೆ ಆ ಸನ್ನಿವೇಶ ಯಾವುದು ಎಂಬ ಕುತೂಹಲವಿದೆ. ಅಮೃತಾ ಇದೀಗ ತಾಯಿಯಾಗುವ ಸಂಭ್ರಮದಲ್ಲಿದ್ದು, ಫೋಟೋ ಶೂಟ್ನಲ್ಲೂ ಬ್ಯುಸಿಯಾಗಿದ್ದಾರೆ. ಧಾರಾವಾಹಿಯಲ್ಲಿ ಶಾಸ್ರ್ತೋಕ್ತವಾಗಿ ಮದುವೆ ಕಾರ್ಯಕ್ರಮ ಚಿತ್ರಿಸಲಾಗಿದೆ. ಬಳೆಶಾಸ್ತ್ರ, ಅರಿಶಿನಶಾಸ್ತ್ರ , ಮೆಹೆಂದಿ, ಖಡಕ್ ರೆಟ್ರೊ ಲುಕ್‌ನಲ್ಲಿ ಇಡಿ ಫ್ಯಾಮಿಲಿ ನೃತ್ಯ ಮಾಡಿದ್ದಾರೆ.
ಕಸ್ತೂರಿ ನಿವಾಸ ಧಾರವಾಹಿಯ ರಾಘವ್, ಖುಷಿ ಮದುವೆಗೆ ಯಾರಿವಳು ಧಾರಾವಾಹಿಯ ಮಾಯಾ ಮತ್ತು ನಿಖಿಲ್ ಹಾಗೂ ಕಾವ್ಯಾಂಜಲಿಯ ಎರಡು ಸೂಪರ್ ಹಿಟ್ ಜೋಡಿಗಳು ಜೊತೆಯಾಗ್ತಿದ್ದಾರೆ. ಇದೆಲ್ಲದರ ನಡುವೆ ಕಥೆಯಲ್ಲಿ ವಿಶೇಷ ತಿರುವುಗಳು ಸೇರಿದ್ದು, ಅಡೆಚಣೆಗಳ ನಡುವೆ ಮದುವೆ ಹೇಗೆ ನಡೆಯತ್ತದೆ ಎಂಬುದು ಕುತೂಹಲ ಮೂಡಿಸಿದೆ.