ಕರ್ನಾಟಕ

karnataka

ETV Bharat / sitara

ಫೀನಿಕ್ಸ್ ಹಕ್ಕಿಯ ಟ್ಯಾಟೂ ಹಾಕಿಸಿಕೊಂಡ ನಟಿ ಭೂಮಿ ಶೆಟ್ಟಿ - ಫೀನಿಕ್ಸ್ ಹಕ್ಕಿಯ ಟ್ಯಾಟೂ ಹಾಕಿಸಿಕೊಂಡ ನಟಿ ಭೂಮಿ ಶೆಟ್ಟಿ

ಬಿಗ್​ಬಾಸ್ ಸೀಸನ್​ 7ರ ಸ್ಪರ್ಧಿಯಾಗಿದ್ದ ಭೂಮಿ ಶೆಟ್ಟಿ ಫೀನಿಕ್ಸ್ ಬರ್ಡ್​ನ ಟ್ಯಾಟೂ ಹಾಕಿಸಿಕೊಂಡಿದ್ದು, ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

ನಟಿ ಭೂಮಿ ಶೆಟ್ಟಿ
ನಟಿ ಭೂಮಿ ಶೆಟ್ಟಿ

By

Published : Dec 27, 2020, 10:54 AM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ತೀರಾ ಮಾಮೂಲಿ.‌ ಅದರಲ್ಲೂ ಸೆಲೆಬ್ರಿಟಿಗಳು ಟ್ಯಾಟೂ ಹಾಕಿಸಿಕೊಳ್ಳುವುದು ಅಪರೂಪವೇನಲ್ಲ. ಇದೀಗ ನಟಿ ಹಾಗೂ ಬಿಗ್​ಬಾಸ್ ಸೀಸನ್​ 7ರ ಸ್ಪರ್ಧಿಯಾಗಿದ್ದ ಭೂಮಿ ಶೆಟ್ಟಿ ಫೀನಿಕ್ಸ್ ಬರ್ಡ್​ನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮಾತ್ರವಲ್ಲದೆ ತಾವು ಹಾಕಿರುವ ಟ್ಯಾಟೂವಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ ಭೂಮಿ ಶೆಟ್ಟಿ.

"ಫೀನಿಕ್ಸ್ ಬರ್ಡ್ ಚಿತಾಭಸ್ಮದಿಂದ ಎದ್ದು ಬರುತ್ತದೆ. ಚಿತಾಭಸ್ಮದಿಂದ ಎದ್ದು ಬರುವುದರಿಂದ ಅದು ಹೊಸಜೀವನ ಪಡೆಯುತ್ತದೆ. ಇದು ಹೋರಾಟದ ಮನೋಭಾವವನ್ನು ಚಿತ್ರಿಸುತ್ತದೆ. ಫೀನಿಕ್ಸ್ ಪಕ್ಷಿಯ ಜೀವನದ ಅದ್ಭುತವನ್ನು ಕಂಡುಕೊಂಡಿದ್ದೇನೆ. ಅದರ ಹುಟ್ಟು ನನಗೆ ಸ್ಪೂರ್ತಿ. ಹೀಗಾಗಿ ಇದರ ಟ್ಯಾಟೂವನ್ನು ಹಾಕಿಸಿಕೊಂಡೆ. ನನಗೀಗ ಫೀನಿಕ್ಸ್ ಪಕ್ಷಿಯಂತೆ ಭಾಸವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ಇದರ ಹೊರತಾಗಿ "ವೈಯಕ್ತಿಕವಾಗಿ ನನ್ನ ಬದುಕು ಕೂಡಾ ರೋಲರ್ ಕೋಸ್ಟರ್ ಸವಾರಿ ಹೊಂದಿತ್ತು. ಆದರೆ ಇದನ್ನು ನಿಧಾನಗೊಳಿಸುವ ಉದ್ದೇಶ ಹೊಂದಿರಲಿಲ್ಲ. ಈಗಷ್ಟೇ ಶುರುವಾಗಿದೆ. ನಾನು ನನ್ನ ಜೀವನದ ಶ್ರೇಷ್ಠ ಪ್ರದರ್ಶನಕ್ಕಾಗಿ ತಯಾರಾಗುತ್ತಿರುವೆ. ನನ್ನ ಸ್ವಭಾವವನ್ನು ಖಂಡಿತವಾಗಿಯೂ ಬಿಡಲಾರೆ, ಫೀನಿಕ್ಸ್ ಪಕ್ಷಿಯಂತೆ ಆಗುವೆ. ನಾನು ಏಳುವೆ ಹಾಗೂ ಅದರಂತೆ ಬದುಕಿನಲ್ಲಿ ಹೊಳೆಯುವೆ" ಎಂದು ಹೇಳಿಕೊಂಡಿದ್ದಾರೆ ಭೂಮಿ ಶೆಟ್ಟಿ.

ಟ್ಯಾಟೂ ಹಾಕಿಸಿಕೊಂಡ ನಟಿ ಭೂಮಿ ಶೆಟ್ಟಿ

"ನಿಜಜೀವನದಲ್ಲಿ ನಾನು ಭಾವನಾತ್ಮಕ ವ್ಯಕ್ತಿಯಾಗಿದ್ದು, ಭಾವನೆಗಳ ಮೇಲಿನ ಸ್ಥಿರತೆ ನನ್ನ ಶಕ್ತಿಯಾಗಿದೆ. ನಾನು ಸೂಕ್ಷ್ಮ ವ್ಯಕ್ತಿ ಹಾಗಂತ ನನ್ನ ಭಾವನೆಗಳ ಮೇಲೆ ಸವಾರಿ ಮಾಡಲು ಬಿಡಲಾರೆ. ನನ್ನ ಮಹತ್ವ ಗೊತ್ತಿದೆ. ಅದರೊಂದಿಗೆ ರಾಜಿ ಮಾಡಲಾರೆ. ನಾನು ಕಳೆದುಕೊಂಡೆನೆಂದು ಕೊರಗಬಹುದು, ಸುಧಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಇದು ಬದುಕುವುದನ್ನು ತಡೆಯಲಾರದು" ಎಂದಿದ್ದಾರೆ.

ABOUT THE AUTHOR

...view details