ಸ್ಯಾಂಡಲ್ವುಡ್ನಲ್ಲಿ ಕೃಷ್ಣ ಎಂದೇ ಖ್ಯಾತಿ ಪಡೆದಿರುವ ನಟ ಅಜಯ್ ರಾವ್ ತಮ್ಮ ಮನೆಯ ಮಹಾರಾಣಿ ಚೆರಿಷ್ಮಾಳ ಮೊದಲನೇ ವರ್ಷದ ಹುಟ್ಟಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಸ್ಯಾಂಡಲ್‍ವುಡ್ ಕೃಷ್ಣನ ಮಗಳನ್ನು ನೋಡಿ ರಾಕಿ ಬಾಯ್ ಹೇಳಿದ್ದೇನು ಗೊತ್ತಾ!! - Actor Yash attended ajay rao duather birthday party news
ನಟ ಅಜಯ್ ರಾವ್ ತಮ್ಮ ಮುದ್ದು ಕಂದಮ್ಮನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದು, ಈ ಕಾರ್ಯಕ್ರಮಕ್ಕೆ ನಟ ಯಶ್ ಸೇರಿದಂತೆ ಚಿತ್ರರಂಗದ ಸ್ನೇಹಿತರು ಭಾಗಿಯಾಗಿದ್ದರು.

ಅಜಯ್ ರಾವ್ 2014ರಂದು ಸ್ವಪ್ನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಕಳೆದ ವರ್ಷ ಅಜಯ್ ರಾವ್ ಪತ್ನಿ ಸ್ವಪ್ನ ರಾವ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಚೆರಿಷ್ಮಾಗೆ ಒಂದು ವರ್ಷವಾಗಿದ್ದು, ಮುದ್ದು ಮಗಳ ಹುಟ್ಟುಹಬ್ಬವನ್ನು ಅಜಯ್ ಸೆಲೆಬ್ರೆಟ್ ಮಾಡಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿ ಪುಟ್ಟ ಕಂದಮ್ಮ ಚೆರಿಷ್ಮಾಳಿಗೆ ವಿಶ್ ಮಾಡಿ ಉಡುಗೊರೆ ನೀಡಿದ್ದಾರೆ.
ಇನ್ನು ಅಜಯ್ ರಾವ್ ಮಗಳ ತುಂಟಾಟ ನೋಡಿದ ರಾಕಿ ಬಾಯ್ ಬಹಳ ಚೂಟಿ ಇದ್ದಾಳೆ ಎಂದು ಅಜಯ್ ರಾವ್ ಮಗಳಿಗೆ ಹೇಳಿದ್ರಂತೆ. ಕಾರ್ಯಕ್ರಮದಲ್ಲಿ ನಟಿ ಆಶಿಕಾ ರಂಗನಾಥ್ ಸೇರಿದಂತೆ ಚಿತ್ರರಂಗದ ಸ್ನೇಹಿತರು ಅಜಯ್ ಮಗಳ ಬರ್ತ್ ಡೇಗೆ ಭಾಗವಹಿಸಿದ್ದರು.