ಕರ್ನಾಟಕ

karnataka

ETV Bharat / sitara

ಮಗದೊಮ್ಮೆ ಶಿವನಾಗಿ ಮಿಂಚು ಹರಿಸಲಿದ್ದಾರೆ ವಿನಯ್ ಗೌಡ - Actor Vinay Gowda

ಶಿವನ ಪಾತ್ರದಲ್ಲಿ ನಟಿಸುವ ಮೂಲಕ ಜನ ಮೆಚ್ಚುಗೆ ಪಡೆದಿರುವ ನಟ ವಿನಯ್ ಗೌಡ ಇದೀಗ ಮತ್ತೊಮ್ಮೆ ಶಿವನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Vinay gowda
Vinay gowda

By

Published : Nov 23, 2020, 9:34 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ಹರಹರ ಮಹಾದೇವ ಧಾರಾವಾಹಿಯಲ್ಲಿ ಮಹಾದೇವ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ವಿನಯ್ ಗೌಡ ಕಿರುತೆರೆಗೆ ಮರಳುತ್ತಿದ್ದಾರೆ.

ಹರಹರ ಮಹಾದೇವ ಧಾರಾವಾಹಿಯಲ್ಲಿ ಶಿವ ಆಗಿ ಅಭಿನಯಿಸಿ ಸ್ಟಾರ್ ವೀಕ್ಷಕರ ಮನ ಸೆಳೆದಿರುವ ವಿನಯ್ ಪುನಃ ಶಿವನ ಪಾತ್ರದಲ್ಲಿ ನಟಿಸಲಿದ್ದು, ಅದೂ ಸ್ಟಾರ್ ಸುವರ್ಣ ವಾಹಿನಿಯಲ್ಲಿಯೇ ಎಂಬುದು ಸಂತಸದ ವಿಚಾರವಾಗಿದೆ.

ಹರಹರ ಮಹಾದೇವ ಧಾರಾವಾಹಿಯ ನಂತರ ಉಘೇ ಉಘೇ ಮಾದೇಶ್ವರ, ಜೈ ಹನುಮಾನ್ ಎಂಬ ಪೌರಾಣಿಕ ಧಾರಾವಾಹಿಗಳಲ್ಲಿ ಶಿವನ ಅವತಾರದಲ್ಲಿ ವಿನಯ್ ಗೌಡ ಬಣ್ಣ ಹಚ್ಚಿದ್ದರು. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಲಿರುವ ಯಡಿಯೂರು ಸಿದ್ಧಲಿಂಗೇಶ್ವರ ಧಾರಾವಾಹಿಯಲ್ಲಿ ಮಗದೊಮ್ಮೆ ಶಿವನ ಅವತಾರದಲ್ಲಿ ವಿನಯ್ ಗೌಡ ಮೋಡಿ ಮಾಡಲಿದ್ದಾರೆ.

ಯಡಿಯೂರು ಸಿದ್ಧಲಿಂಗೇಶ್ವರ ಧಾರಾವಾಹಿಯಲ್ಲಿ ನಾನು ಶಿವನ ಪಾತ್ರಕ್ಕೆ ಜೀವ ತುಂಬಲಿದ್ದೇನೆ. ಅದು ಕೂಡ ನಾಲ್ಕನೇ ಬಾರಿ. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ. ನನಗೆ ದೊರಕಿದೆ ಅಂದರೆ ಅದು ಪುಣ್ಯವೇ ಎನ್ನಬೇಕು. ಯಡಿಯೂರು ಸಿದ್ಧಲಿಂಗೇಶ್ವರ ಧಾರಾವಾಹಿಯು ಶ್ರೇಷ್ಠ ಶರಣ ಸಂತ ಸಿದ್ಧಲಿಂಗೇಶ್ವರ ಕುರಿತಾಗಿದ್ದು, ಅದರ ಭಾಗವಾಗಿರುವುದಕ್ಕೆ ತುಂಬಾ ಸಂತಸದ ವಿಷಯವಾಗಿದೆ ಎಂದಿದ್ದಾರೆ.

ABOUT THE AUTHOR

...view details