ಗಾಲ್ವಾನ್ ಕಣಿವೆಯಲ್ಲಿ ನಮ್ಮ ಸೈನಿಕರ ಮೇಲೆ ದಾಳಿ ಮಾಡಿ 20 ಯೋಧರನ್ನು ಬಲಿ ಪಡೆದ ಚೀನಾ ಮೇಲೆ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಷೇರ್ ಇಟ್, ಕ್ಯಾಮ್ ಸ್ಕ್ಯಾನರ್, ಟಿಕ್ಟಾಕ್ ಸೇರಿದಂತೆ ಚೀನಾದ ಸುಮಾರು 59 ಮೊಬೈಲ್ ಆ್ಯಪ್ಗಳನ್ನು ಬ್ಯಾನ್ ಮಾಡಿದೆ.
ದೇಶಕ್ಕಿಂತ ಟಿಕ್ಟಾಕ್ ಆ್ಯಪ್ ದೊಡ್ಡದಲ್ಲ...ಕಿರುತೆರೆ ನಟ ವಿನಯ್ ಗೌಡ - Vinay gowda supported Central government
ಕೇಂದ್ರ ಸರ್ಕಾರ ಚೀನಾಗೆ ಸೇರಿದ ಸುಮಾರು 59 ಆ್ಯಪ್ಗಳನ್ನು ಡಿಲೀಟ್ ಮಾಡಿದ್ದು ಕಿರುತೆರೆ ನಟ ವಿನಯ್ ಗೌಡ ಕೂಡಾ ಕೇಂದ್ರ ಸರ್ಕಾರದ ನಿಲುವಿಗೆ ಬೆಂಬಲ ಸೂಚಿಸಿದ್ಧಾರೆ.
ಕಿರುತೆರೆ ನಟ ವಿನಯ್ ಗೌಡ
ಟಿಕ್ಟಾಕ್ ಬ್ಯಾನ್ ಮಾಡಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಸಂತೋಷ ವ್ಯಕ್ತಪಡಿಸಿದ್ದಾರೆ. ಸಿನಿಮಾ, ಕಿರುತೆರೆ ನಟ-ನಟಿಯರೂ ಕೂಡಾ ಇದಕ್ಕೂ ಮುನ್ನ ಟಿಕ್ಟಾಕ್ ಡಿಲೀಟ್ ಮಾಡಿ ದೇಶಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದಿನಿ' ಧಾರಾವಾಹಿಯಲ್ಲಿ ನಾಯಕ ವಿರಾಟ್ ಪಾತ್ರಕ್ಕೆ ಜೀವ ತುಂಬುತ್ತಿರುವ ನಟ ವಿನಯ್ ಗೌಡ ಕೂಡಾ ತಮ್ಮ ಟಿಕ್ಟಾಕ್ ಅಕೌಂಟ್ ಡಿಲೀಟ್ ಮಾಡಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಮಹತ್ತರವಾದ ನಿರ್ಧಾರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.