ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದ ವಿಜಯ್ ಸೂರ್ಯ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಖ್ಯಾತ ಕಿರುತೆರೆ ನಟ ಮತ್ತೊಂದು ಹೊಸ ಪ್ರಾಜೆಕ್ಟ್ಗೆ ಸಹಿ ಮಾಡಿದ್ದಾರೆ.
'ಪ್ರೇಮಲೋಕ'ದಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ - undefined
'ಅಗ್ನಿಸಾಕ್ಷಿ'ಹೊರಬಂದಿರುವ ನಟ ವಿಜಯ್ ಸೂರ್ಯ ಹೊಸ ಪ್ರೇಮಲೋಕ ಧಾರವಾಹಿ ಒಪ್ಪಿಕೊಂಡಿದ್ದಾರೆ. ಇದು ಹಿಂದಿ ಸೀರಿಯಲ್ನ ರಿಮೇಕ್.
ಹಿಂದಿಯ ಜನಪ್ರಿಯ 'ಕಸೂತಿ ಜಿಂದಗಿ ಕೇ' ಧಾರಾವಾಹಿ ರಿಮೇಕ್ ವರ್ಷನ್ ಪ್ರೇಮಲೋಕ ಧಾರವಾಹಿಯಲ್ಲಿ ಸೂರ್ಯ ನಟಿಸಲಿದ್ದಾರೆ.ಕನ್ನಡ ಖಾಸಗಿ ವಾಹಿನಿಯಲ್ಲಿ ಸೀರಿಯಲ್ ಪ್ರಸಾರವಾಗಲಿದೆ. ಕಸೂತಿ ಜಿಂದಗಿ ಕೆ ಧಾರಾವಾಹಿಯಲ್ಲಿ ಅನುರಾಗ್ ಪಾತ್ರವನ್ನು ಕನ್ನಡದಲ್ಲಿ ವಿಜಯ್ ನಿಭಾಯಿಸುತ್ತಾರಂತೆ.
ಅಗ್ನಿಸಾಕ್ಷಿ ಧಾರವಾಹಿಯಿಂದ ಹೊರ ಬಂದ ಬಳಿಕ ವಿಜಯ್ ಅವರಿಗೆ ಹಲವು ಚಾನೆಲ್ಗಳಿಂದ ಆಫರ್ಸ್ ಬಂದಿದ್ದವು. ಆದರೆ, ಇವುಗಳನ್ನು ಒಪ್ಪಿಕೊಳ್ಳದೆ ಕಸೂತಿ ಜಿಂದಗಿ ಕೇ ಎಂಬ ಧಾರಾವಾಹಿಯನ್ನು ಕನ್ನಡದಲ್ಲಿ ಮಾಡಲು ಒಪ್ಪಿಕೊಂಡಿದ್ದಾರೆ. ಈ ಧಾರಾವಾಹಿಯನ್ನು ಅಗ್ನಿಸಾಕ್ಷಿ ಧಾರಾವಾಹಿ ನಿರ್ದೇಶಕ ಮೈಸೂರು ಮಂಜು ನಿರ್ದೇಶಿಸಿಲಿದ್ದಾರೆ.ಈಗಾಗಲೇ ಧಾರಾವಾಹಿಯ ಪ್ರೊಮೋ ಶೂಟ್ ಆಗಿದ್ದು, ಶೀಘ್ರದಲ್ಲೇ ಪ್ರಸಾರವಾಗಲಿದೆ.