ಕರ್ನಾಟಕ

karnataka

ETV Bharat / sitara

ಮನಸಾರೆ ಧಾರಾವಾಹಿಯಿಂದ ಹೊರಬಂದ ಸುನೀಲ್ ಪುರಾಣಿಕ್: ಕಾರಣ? - Actor Sunil Puranik

ಅದಿತಿ ಪ್ರಭುದೇವ್​ ಅಭಿನಯದ 'ಆನ' ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಸುನೀಲ್ ಪುರಾಣಿಕ್ ಮನಸಾರೆ ಧಾರಾವಾಹಿಯಿಂದ ಹೊರ ಬಂದಿದ್ದಾರೆ.

Actor Sunil Puranik
ನಟ ಸುನೀಲ್ ಪುರಾಣಿಕ್

By

Published : Apr 17, 2021, 10:32 AM IST

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸಾರೆ ಧಾರಾವಾಹಿಯಲ್ಲಿ ನಾಯಕಿ ಪ್ರಾರ್ಥನಾ ತಂದೆ ಆನಂದ ಮಹೇಂದ್ರ ಆಗಿ ನಟಿಸುತ್ತಿರುವ ನಟ ಸುನೀಲ್ ಪುರಾಣಿಕ್ ಅವರು ಇದೀಗ ಆ ಧಾರಾವಾಹಿಯಿಂದ ಹೊರ ಬಂದಿದ್ದಾರೆ.

ನಟ ಸುನೀಲ್ ಪುರಾಣಿಕ್

ನಟನಾ ಲೋಕದಿಂದ ದೂರವಿದ್ದ ಸುನೀಲ್ ಪುರಾಣಿಕ್ ಮನಸಾರೆ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದರು‌. ಸದ್ಯ ಅದಿತಿ ಪ್ರಭುದೇವ ಅಭಿನಯದ 'ಆನ' ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಧಾರಾವಾಹಿಯಿಂದ ಹೊರ ಬಂದಿದ್ದಾರೆ.

ಸಿನಿಮಾದ ಜೊತೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿರುವ ಕಾರಣ ಸುನಿಲ್ ಪುರಾಣಿಕ್ ಅವರಿಗೆ ಮನಸಾರೆ ಧಾರಾವಾಹಿಯ ಶೂಟಿಂಗ್​ನಲ್ಲಿ ಭಾಗಿಯಾಗುವುದಕ್ಕೆ ಕಷ್ಟವಾಗುತ್ತಿದೆ. ಆ ಕಾರಣದಿಂದ ಮನಸಾರೆ ಧಾರಾವಾಹಿಯ ಪಾತ್ರಕ್ಕೆ ವಿದಾಯ ಹೇಳಿದ್ದಾರೆ‌ ಎನ್ನಲಾಗ್ತಿದೆ.

ನಟ ಸುನೀಲ್ ಪುರಾಣಿಕ್

ಅಪ್ಪನ ಆಶೀರ್ವಾದ ಪಡೆದಿರುವ ನಾಯಕಿ ಪ್ರಾರ್ಥನಾ ತನ್ನ ಪ್ರಿಯಕರ ಯುವರಾಜ್ ಜೊತೆ ಮದುವೆಯಾಗಲಿದ್ದಾಳೆ. ಪ್ರಾರ್ಥನಾಳನ್ನು ತನ್ನ ಮಗಳು ಎಂದೇ ಸ್ವೀಕರಿಸದ ಆನಂದ ಮಹೇಂದ್ರ ಆಕೆಯನ್ನು ಧಾರೆ ಎರೆದು ಕೊಡಲು ತಯಾರಾಗಿದ್ದಾನಾ? ಮುಂದಿನ ದಿನಗಳಲ್ಲಿ ಯಾವ ರೀತಿ ಟ್ವಿಸ್ಟ್ ಎದುರಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details