ಜಿಲ್ಕಾ ಚಿತ್ರದ ಮೂಲಕ ಕನ್ನಡ, ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಯುವ ನಟ ಕವೀಶ್ ಶೆಟ್ಟಿ. ಇವರಿಗೆ, ಕನ್ನಡದ ಸ್ಟಾರ್ ನಟರೊಬ್ಬರು ಫೋನ್ ಮಾಡಿ ಮೊದಲ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಯಾರು ಆ ಸ್ಟಾರ್ ಅಂತೀರಾ?..ಅವರೇ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.
ಹೌದು, ಹೊಸ ಪ್ರತಿಭೆಗಳನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸುವುದರಲ್ಲಿ ನಟ ಶಿವರಾಜ್ ಕುಮಾರ್ ಎತ್ತಿದ ಕೈ. ಕೆಲ ದಿನಗಳ ಹಿಂದೆ, ಜಿಲ್ಕಾ ಚಿತ್ರದ ಹೀರೋ ಕಮ್ ಡೈರೆಕ್ಟರ್ ಕವೀಶ್ ಶೆಟ್ಟಿ ಮೊಬೈಲ್ಗೆ ಕರೆ ಬಂದಿತ್ತು. ಕರೆ ರಿಸೀವ್ ಮಾಡಿದರೆ ಇನ್ನೊಂದು ಕಡೆಯಿಂದ ಹ್ಯಾಟ್ರಿಕ್ ಹೀರೋ ಶಿವಣ್ಣ. ಅವರ ಧ್ವನಿ ಕೇಳಿ ತಬ್ಬಿಬ್ಬಾಗಿದ್ದು ನಿಜ. ಅದರೊಂದಿಗೆ ಆಶ್ಚರ್ಯ ಕೂಡ ಆಯ್ತು ಎನ್ನುತ್ತಾರೆ ಕವೀಶ್ ಶೆಟ್ಟಿ.
ಅಮೆಜಾನ್ ಪ್ರೈಮ್ ನಲ್ಲಿ ನಿಮ್ಮ ಜಿಲ್ಕಾ ಸಿನಿಮಾ ನೋಡಿದೆ. ತುಂಬಾ ಚೆನ್ನಾಗಿ ಮಾಡಿದ್ದೀರಿ. ಚಿತ್ರಕಥೆಯಿಂದ ಹಿಡಿದು ನಿಮ್ಮ ಅಭಿನಯ ಮತ್ತು ನಿರ್ದೇಶನ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಇಷ್ಟವಾಯ್ತು. ಹೆತ್ತವರು ಮತ್ತು ಹರೆಯದ ವಯಸ್ಸಿನ ಮಕ್ಕಳ ಜವಾಬ್ದಾರಿ ಮತ್ತು ತಪ್ಪುಗಳನ್ನು ಬಹಳ ಅಚ್ಚುಕಟ್ಟಾಗಿ ಮತ್ತು ಚೆನ್ನಾಗಿ ವಿವರಿಸಿದ್ದೀರಿ ಎನ್ನುತ್ತಾ ಒಮ್ಮೆ ಭೇಟಿಯಾಗಲು ಕೂಡ ಶಿವಣ್ಣ ಹೇಳಿದ್ದಾರೆ.