'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಆಗಿ ಅಭಿನಯಿಸುತ್ತಿರುವ ರಕ್ಷ್ ಮತ್ತೆ ತಮ್ಮ ಹೆಸರನ್ನು ಬದಲಾಯಿಸಿದ್ದಾರೆ. ರಕ್ಷ್ ಮೊದಲ ಹೆಸರು ರಕ್ಷತ್. ಆದರೆ ನಂತರ ಅವರು ರಕ್ಷ್ ಎಂದು ಹೆಸರು ಬದಲಿಸಿಕೊಂಡಿದ್ದರು. ಇದೀಗ ಮತ್ತೆ ಎರಡನೇ ಬಾರಿ ಹೆಸರು ಬದಲಿಸಿದ್ದಾರೆ.
ಎರಡನೇ ಬಾರಿ ಮತ್ತೆ ಹೆಸರು ಬದಲಿಸಿಕೊಂಡ ಶುಂಠಿ ಶಂಕರ - Vedant vasistha fame actor
ಶುಂಠಿ ಶಂಕರ, ವೇದಾಂತ್ ವಸಿಷ್ಠ ಅಲಿಯಾಸ್ ರಕ್ಷ್ ಮತ್ತೊಮ್ಮೆ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಈ ನಟನ ಮೂಲ ಹೆಸರು ರಕ್ಷತ್ ಆಗಿತ್ತು. ಆದರೆ ಈಗ ನ್ಯೂಮರಾಲಜಿ ಪ್ರಕಾರ ಮತ್ತೆ ಹೆಸರು ಬದಲಿಸಿಕೊಂಡಿದ್ದಾರೆ.

ಈ ನಟನ ಹೆಸರಿನ ಉಚ್ಛಾರ ರಕ್ಷ್ (Raksh)ಆದರೂ ಈಗ ಆ ಹೆಸರಿನ ಮೂಲಕ ಮತ್ತೊಂದು K ಅಕ್ಷರನ್ನು ಸೇರಿಸಿಕೊಂಡಿದ್ದಾರೆ. ಈಗ ಆಂಗ್ಲ ಭಾಷೆಯಲ್ಲಿ ಅವರ ಹೆಸರು Rakksh ಆಗಿದೆ. ನ್ಯೂಮರಾಲಜಿ ಪ್ರಕಾರ ರಕ್ಷ್ ಈ ಹೆಸರನ್ನು ಬದಲಿಸಿಕೊಂಡಿದ್ದಾರಂತೆ. ಸಾಮಾಜಿಕ ಜಾಲತಾಣದಲ್ಲೂ ತಮ್ಮ ಪ್ರೊಫೈಲ್ ಹೆಸರನ್ನು ಬದಲಿಸಿದ್ದಾರೆ.
ಪುಟ್ಟಗೌರಿ ಮದುವೆ ಮಹೇಶನಾಗಿ, ಗಟ್ಟಿಮೇಳದ ವೇದಾಂತ್ ಆಗಿ ಹೆಸರು ಮಾಡಿರುವ ಈ ನಟ ಕೆಲವು ದಿನಗಳ ಕಾಲ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಮತ್ತೆ ವೇದಾಂತ್ ಈ ಧಾರಾವಾಹಿಯಲ್ಲಿ ನಟಿಸಲಿದ್ದಾರಾ ಇಲ್ಲವಾ ಎಂದು ಎಲ್ಲರಿಗೂ ಅನುಮಾನ ಕಾಡತೊಡಗಿತ್ತು. ಆದರೆ ಕಥೆಗೆ ಟ್ವಿಸ್ಟ್ ನೀಡುವ ಕಾರಣ ಅವರು ಧಾರಾವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ತಿಳಿದ ನಂತರ ಧಾರಾವಾಹಿಪ್ರಿಯರಿಗೆ ಸಮಾಧಾನವಾಗಿತ್ತು.