ಕರ್ನಾಟಕ

karnataka

ETV Bharat / sitara

ಆನ್​​ಲೈನ್​​​​​​​​​​​​​​​ ವ್ಯವಹಾರದ ಬಗ್ಗೆ ಎಚ್ಚರದಿಂದಿರಿ ಅಂತಿದ್ದಾರೆ ನಟ ಕಿರಣ್ ರಾಜ್ - Kiran raj awareness about Bank

ಯಾವುದೇ ಬ್ಯಾಂಕ್​​​ಗಳಾಗಲಿ ಯುಪಿಐ ಐಡಿ, ಕ್ಯೂ ಆರ್​​ ಕೋಡ್, ಒಟಿಪಿಯಂತಹ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಇಂತಹ ಫ್ರಾಡ್​ಗಳಿಂದ ನೀವು ಎಚ್ಚರಿಕೆಯಿಂದ ಇರಿ ಎಂದು ನಟ ಕಿರಣ್ ರಾಜ್ ಮನವಿ ಮಾಡಿದ್ದಾರೆ.

Kiran raj Kiran raj awareness
ಕಿರಣ್ ರಾಜ್

By

Published : Sep 4, 2020, 2:33 PM IST

'ಕಿನ್ನರಿ', 'ಕನ್ನಡತಿ' ಧಾರಾವಾಹಿ ನಾಯಕ ಕಿರಣ್ ರಾಜ್​ ಆ್ಯಕ್ಟಿಂಗ್ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯರಾಗಿದ್ದಾರೆ. ಇದೀಗ ಅವರು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ಪೊಲೀಸರ ಸಹಯೋಗದೊಂದಿಗೆ ಜಾಗೃತಿ ವಿಡಿಯೋವೊಂದನ್ನು ಮಾಡಿ ಅದನ್ನು ತಮ್ಮ ಇನ್ಸ್​ಟಾಗ್ರಾಮ್​​ನಲ್ಲಿ ಅಪ್​​ಲೋಡ್ ಮಾಡಿದ್ದಾರೆ.

ಬ್ಯಾಂಕ್ ಖಾತೆಯ ಮಾಹಿತಿ ಕೇಳಲು ಎಲ್ಲರಿಗೂ ಅನೇಕ ಕರೆಗಳು ಬಂದಿರುತ್ತವೆ. ಅವು ನಮ್ಮನ್ನು ಟ್ಯ್ರಾಪ್ ಮಾಡುತ್ತವೆ. ಯಾವುದೇ ಬ್ಯಾಂಕ್ ಆಗಲಿ ಯುಪಿಐ ಐಡಿ, ಕ್ಯೂ ಆರ್ ಕೋಡ್ , ಒಟಿಪಿಯಂತಹ ನಮ್ಮ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ. ನೀವು ಇಂತಹ ವ್ಯಕ್ತಿಗಳಿಂದ ಮೋಸಕ್ಕೊಳಗಾಗಿದ್ದರೆ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿ. ಇದುವರೆಗೂ 50 ಸಾವಿರ ಸೈಬರ್ ಕ್ರೈಮ್ ಕೇಸ್​​​​​​​​​​​​​​​ಗಳು ದಾಖಲಾಗಿದ್ದು ಬೆಂಗಳೂರು ಸೈಬರ್ ಕ್ರೈಮ್ ಪೋಲಿಸರು ಹಲವು ವಂಚಕರನ್ನು ಬಂಧಿಸಿದ್ದಾರೆ.

ಪೊಲೀಸರ ಸಹಯೋಗದೊಂದಿಗೆ ಕಿರಣ್ ಜಾಗೃತಿ ಸಂದೇಶ

ಬೆಂಗಳೂರಿನಲ್ಲಿ ಪ್ರತ್ಯೇಕ ಸೈಬರ್ ಕ್ರೈಮ್ ಪೊಲೀಸ್​​​ ಠಾಣೆ ಸ್ಥಾಪನೆಯಾಗಿರುವುದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡಬೇಕಾದ ವಿಷಯ ಎಂದು ಕಿರಣ್ ರಾಜ್ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಆನ್​​​​ಲೈನ್​​​​​​​​​​​​​​​​​ನಲ್ಲಿ ನೀವು ಹಣ ಪಾವತಿಸುವಾಗ ಎಚ್ಚರದಿಂದಿರಿ. ಒಂದು ವೇಳೆ ಪಾವತಿಸುವ ಮೊದಲು ನಿಮಗೆ ಸಂದೇಹ ಇದ್ದರೆ ಗ್ರಾಹಕರ ವೇದಿಕೆಗೆ ಕರೆ ಮಾಡಿ ನಿಮ್ಮ ಸಂದೇಹ ನಿವಾರಿಸಿಕೊಳ್ಳಿ. ನಂತರವೇ ಮುಂದುವರಿಯಿರಿ ಎಂದು ಕಿರಣ್ ಜನರಿಗೆ ಸಂದೇಶ ನೀಡಿದ್ದಾರೆ.

ABOUT THE AUTHOR

...view details