ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇದೇ ದಿನದಂದು ಅವರು ನಟಿಸಿರುವ ಬಹದ್ದೂರ್ ಗಂಡು ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದೆ. ಇನ್ನು, ಕಿರಣ್ ರಾಜ್ ಅವರ ತಂದೆಯ ಹುಟ್ಟುಹಬ್ಬ ಒಂದೇ ದಿನ. ನಿನ್ನೆ ರಾತ್ರಿ ಮೈಸೂರಿನಲ್ಲಿರುವ ತಂದೆ-ತಾಯಿಯೊಂದಿಗೆ ಹುಟ್ಟುಹಬ್ಬವನ್ನು ಕಿರಣ್ ರಾಜ್ ಆಚರಿಸಿಕೊಂಡಿದ್ದಾರೆ.
ಬಹದ್ದೂರ್ ಗಂಡು ಸಿನಿಮಾ ಟೀಸರ್ ಬಿಡುಗಡೆ ತಮ್ಮ ಹುಟ್ಟುಹಬ್ಬದ ಅಂಗವಾಗಿ ಕಿರಣ್ ರಾಜ್ ಫ್ಯಾನ್ಸ್ಗಳಿಗೆ ಈಗಾಗಲೇ ಗಿಫ್ಟ್ ನೀಡಿದ್ದಾರೆ. ಈಗಾಗಲೇ ಆರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರುವ ಕಿರಣ್ ರಾಜ್ ಅವರಿಗೆ ಈ ಸಿನಿಮಾ ಬಹಳ ಮುಖ್ಯವಾಗಿದೆ. ಟೈಟಲ್ನಿಂದಲೇ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿದೆ.
ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಬರುವ ಫೈಟ್ಗೋಸ್ಕರ್ ಕಿರಣ್ ರಾಜ್ ನಾಲ್ಕು ತಿಂಗಳ ಕಾಲ ಸತತವಾಗಿ ರಾತ್ರಿ 12 ರಿಂದ ಮುಂಜಾನೆ 4:30ವರೆಗೆ ನಿರಂತರವಾಗಿ 4 ತಿಂಗಳು ವರ್ಕೌಟ್ಮಾಡಿದ್ದಾರಂತೆ. ಸಿನಿಮಾದ ಟೀಸರ್ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಸಿದ್ಧ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ಯಶಾ ಶಿವಕುಮಾರ್ ಚಿತ್ರದ ನಾಯಕಿಯಾಗಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಈ ಸಿನಿಮಾಗಿದೆ. ಪ್ರಸಿದ್ಧ್ ಸಿನಿಮಾಸ್ ಹಾಗೂ ರಮೇಶ್ ರೆಡ್ಡಿ ಬಹದ್ದೂರ್ ಗಂಡು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ, ಯಳಂದೂರು, ವಡ್ಡಗೆರೆ, ಸತ್ತಿಗಾಲ ಇತರೆ ಸ್ಥಳಗಳಲ್ಲಿ 30 ದಿನಗಳವರಗೆ ಚಿತ್ರೀಕರಣ ಮಾಡಲಾಗಿದೆ.