ಕರ್ನಾಟಕ

karnataka

ETV Bharat / sitara

ಪೈಲೆಟ್ ಆಗುವ ಕನಸು ಕಂಡು ಆ್ಯಕ್ಟರ್ ಆದ ಜಯ್ ಡಿಸೋಜ - Small screen actor Jay D Souza

ಕನ್ನಡ ಕಿರುತೆರೆ ಮೂಲಕ ಕರಿಯರ್ ಆರಂಭಿಸಿ ಈಗ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಜಯ್ ಡಿಸೋಜ ಪೈಲೆಟ್ ಆಗಬೇಕು ಎಂದುಕೊಂಡಿದ್ದವರು. ಆದರೆ ಅದು ಸಾಧ್ಯವಾಗದಿದ್ದಾಗ ಆ್ಯಕ್ಟಿಂಗ್​​​​ನತ್ತ ಮುಖ ಮಾಡಿದ ಜಯ್ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯ ತರಬೇತಿ ಪಡೆದು ಬಣ್ಣದ ಲೋಕಕ್ಕೆ ಬಂದರು.

Actor Jay D Souza
ಜಯ್ ಡಿಸೋಜ

By

Published : Oct 10, 2020, 3:26 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ಅಭಿನಯಿಸಿದ್ದ ಜಯ್ ಡಿಸೋಜ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಪವಿತ್ರ ಬಂಧನಮ್ ಧಾರಾವಾಹಿ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟ ಜಯ್ ಡಿಸೋಜ ಮತ್ತೊಂದು ಹೊಸ ತೆಲುಗು ಧಾರಾವಾಹಿಯಲ್ಲಿ ನಟಿಸಲಿದ್ದಾರೆ.

ಕಿರುತೆರೆ ನಟ ಜೈ ಡಿಸೋಜ

ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ಸಾಗಿದ್ದರೆ ಜಯ್ ಇಂದು ಪೈಲೆಟ್ ಆಗಿ ಆಗಸದಲ್ಲಿ ಹಾರಾಡುತ್ತಿದ್ದರು. ಇಂಜಿನಿಯರಿಂಗ್ ಪದವಿ ಪಡೆದಿರುವ ಜಯ್ ಅವರನ್ನು ಮಾಡೆಲಿಂಗ್ ಲೋಕ ಕೈ ಬೀಸಿ ಕರೆಯಿತು. ಮಾಡೆಲಿಂಗ್ ಕ್ಷೇತ್ರದಲ್ಲಿ ಒಂದಷ್ಟು ರ್‍ಯಾಂಪ್ ವಾಕ್ ಮಾಡಿದ್ದ ಜಯ್ ಕೆಲವೊಂದು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರು. ನಂತರ ಮಾಡೆಲಿಂಗ್​​​​​​​​ನಿಂದ ನಟನಾ ಕ್ಷೇತ್ರಕ್ಕೆ ಬರುವ ಆಲೋಚನೆ ಮಾಡಿದ ಜಯ್ ಮುಂಬೈಗೆ ಹೋದರು. ಅಲ್ಲಿ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯ ತರಬೇತಿ ಪಡೆದು ಮತ್ತೆ ಹಿಂತಿರುಗಿದ ಜಯ್, ಎಲ್ಲಾ ಆಡಿಶನ್​​​​​​​​​ಗಳಿಗೆ ಮಿಸ್ ಮಾಡದೆ ಹೋಗುತ್ತಿದ್ದರು. ಕೊನೆಗೂ ಅವರ ಪ್ರಯತ್ನಕ್ಕೆ ಫಲ ದೊರಕಿತು.

ಪೈಲೆಟ್ ಆಗುವ ಕನಸು ಕಂಡಿದ್ದ ಜಯ್

'ಮನೆದೇವ್ರು' ಧಾರಾವಾಹಿ ಜಯ್ ಬಣ್ಣದ ಬದುಕಿಗೆ ಮುನ್ನುಡಿ ಬರೆಯಿತು. ಜಯ್ ಇಂದು ನಟನಾ ಲೋಕದಲ್ಲಿ ಹೆಸರು ಮಾಡಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಮನೆದೇವ್ರು ಧಾರಾವಾಹಿ. "ಇಂದು ನಾನು ನಟನಾಗಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಮೂಲ ಕಾರಣ ಮನೆದೇವ್ರು ಧಾರಾವಾಹಿ. ಬಯಸದೆ ಬಂದ ಅವಕಾಶವನ್ನು ಬೇಡ ಎನ್ನದೇ ನಟಿಸಲು ಒಪ್ಪಿಕೊಂಡೆ. ಅದೇ ನನ್ನ ಬಣ್ಣದ ಬದುಕಿಗೆ ನಾಂದಿಯಾಯತು. ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದೇನೆ. ಉತ್ತಮ ಅವಕಾಶ ದೊರೆತರೆ ಮತ್ತೆ ಕನ್ನಡ ಕಿರುತೆರೆಗೆ ಮರಳಿ ಬರುತ್ತೇನೆ" ಎಂದು ಹೇಳುತ್ತಾರೆ ಜಯ್ ಡಿಸೋಜ.

ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಜಯ್

ಜಯ್ ಪರಭಾಷೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರೂ ಮನೆದೇವ್ರು ಧಾರಾವಾಹಿಯ ಸೂರ್ಯ ಆಗಿ ಇಂದಿಗೂ ಕನ್ನಡ ಕಿರುತೆರೆಯಲ್ಲಿ ಪರಿಚಿತ. ರಾಗ, ಹ್ಯಾಪಿ ನ್ಯೂ ಇಯರ್ ಸಿನಿಮಾಗಳಲ್ಲಿ ಕೂಡಾ ಜಯ್ ನಟಿಸಿದ್ದಾರೆ. ಬಿಗ್​​​​​​​​​​​​​​​​ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಜಯ್ ಭಾಗವಹಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಕಾರಣಾಂತರಗಳಿಂದ ಹೋಗಲಾಗಲಿಲ್ಲ.

ಮನೆದೇವ್ರು ಖ್ಯಾತಿಯ ಜಯ್

"ನನಗೆ ಬಿಗ್​​​​​​ಬಾಸ್​​ನಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ಸುಳ್ಳಲ್ಲ. ಆದರೆ ಆ ಸಮಯದಲ್ಲಿ ನಾನು ಎರಡು ತೆಲುಗು ಸೀರಿಯಲ್‌ಗಳನ್ನು ಮಾಡುತ್ತಿದ್ದೆ. ಇದರ ಜೊತೆಗೆ ತಮಿಳು ಸಿನಿಮಾವೊಂದರಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಈ ಪ್ರಾಜೆಕ್ಟ್​​​​​​​​​​ಗಳ ಸಲುವಾಗಿ ದೊಡ್ಮನೆಗೆ ಹೋಗಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅನುಕೂಲವಾದರೆ ಜಯ್ ದೊಡ್ಮನೆ ಸ್ಪರ್ಧಿಯಾಗಿ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ.

ABOUT THE AUTHOR

...view details